ನೀನು ಕಪ್ಪಗಿದ್ದೀಯಾ ಅಂತ ಪದೇ-ಪದೇ ರೇಗಿಸುತ್ತಿದ್ದ ಹೆಂಡತಿ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತಿ; ಆಮೇಲೇನಾಯ್ತು ಗೊತ್ತಾ?

police
Published on

ಗ್ವಾಲಿಯಾರ್: ಪತಿ ಕಪ್ಪಾಗಿದ್ದಾನೆ ಎಂದು ಹೆಂಡತಿಯೊಬ್ಬಳು ಆತನನ್ನೇ ಬಿಟ್ಟು ಹೋಗಿರುವ ಘಟನೆ ಗ್ವಾಲಿಯರ್ ನಗರದಲ್ಲಿ ನಡೆದಿದೆ.

ಹೌದು...ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ತಾನು ಕಪ್ಪಾಗಿದ್ದೇನೆಂದು ಪತ್ನಿ ತನ್ನನ್ನು ತನ್ನನ್ನು ತೊರೆದಿದ್ದಾಳೆ ಎಂದು ಆರೋಪಿಸಿದ್ದಾನೆ. ತನ್ನ ವಿರುದ್ಧ ಕಿರುಕುಳದ ಸುಳ್ಳು ದೂರನ್ನು ದಾಖಲಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಆ ವ್ಯಕ್ತಿ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಶನಿವಾರ ಇಬ್ಬರನ್ನೂ ಪೊಲೀಸರು ಕೌನ್ಸೆಲಿಂಗ್‌ಗೆ ಕರೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನಗರದ ವಿಕ್ಕಿ ಫ್ಯಾಕ್ಟರಿ ನಿವಾಸಿಯಾದ 14 ತಿಂಗಳ ಹಿಂದೆ ಯುವತಿಯನ್ನು ವಿವಾಹವಾಗಿದ್ದರು. ಆದರೆ ಮದುವೆಯ ನಂತರ, ಅವನ ಹೆಂಡತಿ ಅವನಿಗೆ ತನ್ನ ಬಣ್ಣವನ್ನು ಉಲ್ಲೇಖಿಸಿ ತೊಂದರೆ ಕೊಡುವುದು, ನಿಂದಿಸುವುದು ಮಾಡುತ್ತಿದ್ದಳಂತೆ. 10 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪತ್ನಿ ಮಗುವನ್ನು ಬಿಟ್ಟು ತನ್ನ ತವರು ಮನೆಗೆ ತೆರಳಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.

ಕರೆತರಲು ಅವಳ ತವರು ಮನೆಗೆ ಹೋದಾಗ ನನ್ನ ಬಣ್ಣವನ್ನು ಉಲ್ಲೇಖಿಸಿ ಆಕೆ ಕೆಟ್ಟದಾಗಿ ಕಾಮೆಂಟ್​ ಮಾಡಿ ಹೀಯಾಳಿಸಿದ್ದಾಳೆ. ನನ್ನ ಜೊತೆ ಹಿಂತಿರುಗಳು ನಿರಾಕರಿಸಿದಳು. ಬಳಿಕ ಮಹಿಳಾ ಪೊಲೀಸ್​ ಠಾಣೆಯಲ್ಲಿ ಕಿರುಕುಳ ದೂರು ದಾಖಲಿಸಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.

ಆಗ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಇಬ್ಬರನ್ನೂ ಕೌನ್ಸೆಲಿಂಗ್‌ಗೆ ಕರೆದಿದ್ದಾರೆ. ಈ ಇಬ್ಬರ ಜೊತೆಗೆ ಜುಲೈ 13ರಂದು ಕೌನ್ಸೆಲಿಂಗ್‌ಗೆ ಮಾಡಲಿದ್ದೇವೆ. ಇದಾದ ನಂತರವೇ ಈ ಕುರಿತು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಅಂತಾ ಅಧಿಕಾರಿ ಕಿರಣ್ ಅಹಿರ್ವಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net