ಪರೀಕ್ಷೆ ತಪ್ಪಿಸಿಕೊಳ್ಳಲು ಈ ವಿದ್ಯಾರ್ಥಿ ಎಸಗಿದ್ದು ಕಾನೂನು ಬಾಹಿರ ಕೃತ್ಯ; ಪೊಲೀಸರ ವಶದಲ್ಲಿರುವ ಆರೋಪಿ ಮಾಡಿದ್ದೇನು?

crime
Published on

ಭೋಪಾಲ್​: ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ಮಕ್ಕಳು ಏನೆಲ್ಲ ಉಪಾಯ ಮಾಡುತ್ತಾರೆ. ಆದರೆ ಈ ವಿದ್ಯಾರ್ಥಿ ತನ್ನ ಸಂಬಂಧಿ ಪುಟ್ಟ ಬಾಲಕನನ್ನೇ ಅಪಹರಿಸಿದ.

ಮಧ್ಯಪ್ರದೇಶದ ಪಿಯು ವಿದ್ಯಾರ್ಥಿ ರಣಬೀರ್​ (18) ತನ್ನ ಸಂಬಂಧಿ 3 ವರ್ಷದ ಬಾಲಕನ್ನು ಅಪಹರಿಸಿ ಹಗ್ಗದಲ್ಲಿ ಕಟ್ಟಿ ಹಾಕಿದ್ದ. ಮಂಗಳವಾರದಿಂದ ರಾಜ್ಯದಲ್ಲಿ ಪರೀಕ್ಷೆಗಳು ಆರಂಭಗೊಂಡಿವೆ. ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ರಣಬೀರ್​ ಈ ಕೃತ್ಯ ಎಸಗಿದ್ದಾನೆ.

3 ವರ್ಷದ ಆ ಮಗು ಮಲಗಿದ್ದಾಗ ರಣಬೀರ್​ ಎತ್ತಿಕೊಂಡು ಹೋಗಿದ್ದಾನೆ. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಬಯಲಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಹತ್ತಿರದಲ್ಲೇ ಮದುವೆ ಇರುವ ಕಾರಣ ಮನೆಯಲ್ಲಿ ಕೆಲಸಗಳಿಂದ ಆ ಮಗುವಿನ ತಾಯಿಗೆ ಪುರುಸೊತ್ತು ಸಿಕ್ಕಿರಲಿಲ್ಲ. ಆಮೇಲೆ ನೆನಪಾಗಿ ಹುಡುಕಿದರೆ ಮಗು ನಾಪತ್ತೆಯಾಗಿರುವುದು ತಿಳಿದಿದೆ.

ಮಾಹಿತಿ ತಿಳಿದು ತಕ್ಷಣವೇ ಆ ಗ್ರಾಮಕ್ಕೆ ಬಂದ ಪೊಲೀಸರಿಗೆ ಮನೆಯಲ್ಲಿ ಒಂದು ನೋಟ್​ ಸಿಕ್ಕಿದೆ. ಅದರಲ್ಲಿ ಆ ಮಗು ಬಿಟ್ಟಿರುವ ಸ್ಥಳದ ಬಗ್ಗೆ ನಿರ್ದೇಶನ ನೀಡಲಾಗಿದೆ.

ನಾವು ರಣಬೀರ್​ನನ್ನು ಪ್ರಶ್ನಿಸಿದಾಗ ಸತ್ಯವನ್ನು ಬಹಿರಂಗಪಡಿಸಿದ. ಅವನು ಆ ಮಗುವನ್ನು ಬಿಟ್ಟಿದ್ದ ಸ್ಥಳಕ್ಕೆ ನಮ್ಮನ್ನು ಕರೆದೊಯ್ದನು. ಮಗು ಸುರಕ್ಷಿತವಾಗಿದ್ದು, ಪಾಲಕರಿಗೆ ಒಪ್ಪಿಸಲಾಗಿದೆ. ಅಪಹರಣಕ್ಕೆ ಸಂಬಂಧಿಸಿದಂತೆ ರಣಬೀರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್​ಪಿ ಅಸಿತ್​ ಯಾದವ್​ ತಿಳಿಸಿದ್ದಾರೆ.

ರಣಬೀರ್​ ಈಗ ಪೊಲೀಸರ ವಶದಲ್ಲಿದ್ದು ಆತನ ಇಚ್ಚೆಯಂತೆಯೇ ಹಾಗಿದೆ. ಪೊಲೀಸ್​ ಠಾಣೆಯಯಲ್ಲಿರುವುದರಿಂದ ಆತ ಪರೀಕ್ಷೆಗೆ ಗೈರಾಗಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net