ಮಧು ಬಂಗಾರಪ್ಪ ಜನ್ಮದಿನ ಸಂಭ್ರಮ

sor m
ಸೊರಬ ಬಂಗಾರ ಧಾಮದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು. ಸದಾನಂದ ಗೌಡ, ಎಚ್.ಗಣಪತಿ, ಎಂ.ಡಿ.ಶೇಖರಪ್ಪ, ಅಣ್ಣಪ್ಪ, ಕೆ.ವಿ.ಗೌಡ, ಜಗದೀಶ್, ಸುನಿಲ್ ಗೌಡ, ತಬಲಿ ಬಂಗಾರಪ್ಪ, ಶ್ರೀಕಾಂತ ಇತರರಿದ್ದರು.
Published on

ಸೊರಬ: ಪಟ್ಟಣದ ಬಂಗಾರಧಾಮದಲ್ಲಿ ಭಾನುವಾರ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನವನ್ನು ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿದರು.

ಸಚಿವ ಮಧು ಬಂಗಾರಪ್ಪ ಬೆಳಗ್ಗೆ ಬಂಗಾರಧಾಮದಲ್ಲಿರುವ ತಂದೆ ಬಂಗಾರಪ್ಪ, ತಾಯಿ ಶಕುಂತಲಾ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಸಮೀಪದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ವೇದಿಕೆಯಲ್ಲಿ ಕಾರ್ಯಕರ್ತರ ಜತೆಗೂಡಿ ಕೇಕ್ ಕತ್ತರಿಸಿದರು. ಸರ್ಕಾರಿ ನೌಕರರು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಶುಭಕೋರಿದರು. ಇದಕ್ಕೂ ಮೊದಲು ಆನವಟ್ಟಿ ಮತ್ತು ಕುಬಟೂರು ಗ್ರಾಮದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಗರ, ಶಿರಾಳಕೊಪ್ಪ, ತಾಳಗುಪ್ಪ ಸೇರಿ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದರು.

ಮುಖಂಡರಾದ ಸದಾನಂದ ಗೌಡ ಬಿಳಗಲಿ, ಎಚ್.ಗಣಪತಿ, ಎಂ.ಡಿ.ಶೇಖರಪ್ಪ, ಅಣ್ಣಪ್ಪ, ಕೆ.ವಿ.ಗೌಡ, ಜಗದೀಶ್, ಸುನಿಲ್ ಗೌಡ, ತಬಲಿ ಬಂಗಾರಪ್ಪ, ಶ್ರೀಕಾಂತ, ಅಶೋಕ ಹೆಗಡೆ, ಸುಜಾತಾ ಜೋತಾಡಿ, ಭರತ್ ರಾಜ್, ಪ್ರವೀಣ್, ಅಜ್ಜಪ್ಪ, ಸುಧಾಕರ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಒ ಡಾ. ಪ್ರದೀಪ್‌ಕುಮಾರ್, ಸಿಪಿಐ ರಾಜಶೇಖರ್, ಪ್ರಮೀಳಾ, ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net