

ಕೋಲಾರ : ಅಂತರ್ಜಲ ಇಲಾಖೆ ಇದೆ ಎಂಬುದನ್ನೇ ಜನ ಮರೆತಿದ್ದರು. ಈ ಇಲಾಖೆ ಸಣ್ಣ ನೀರಾವರಿ ಇಲಾಖೆಯೊಂದಿಗೆ ವಿಲೀನವಾದ ಬಳಿಕ ಜಲ ಸಂರಕ್ಷಣೆ ಹಾಗೂ ಸದ್ವಿನಿಯೋಗಕ್ಕಾಗಿ ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನ ನಡೆದಿದೆ ಎಂದು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ನಗರದ ಟಿ.ಚನ್ನಯ್ಯರಂಗ ಮಂದಿರದಲ್ಲಿ ಶನಿವಾರ ಅಂತರ್ಜಲ ನಿರ್ದೇಶನಾಲಯ, ಸಣ್ಣ ನೀರಾವರಿ ಇಲಾಖೆ ಹಮ್ಮಿಕೊಂಡಿದ್ದ ರಾಜ್ಯದ ಅಂತರ್ಜಲ ಮೌಲೀಕರಣ 2020 ವರದಿ ಬಿಡುಗಡೆ ಮಾಡಿ ಮಾತನಾಡಿ,
ರಾಜ್ಯದ 71 ತಾಲೂಕುಗಳಲ್ಲಿ ಅಂತರ್ಜಲ ಕುಸಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ಸಂರಕ್ಷಣೆ, ಮಿತ ಬಳಕೆ ಹಾಗೂ ಮರು ಬಳಕೆಗಾಗಿ ಅವಕಾಶ ಕಲ್ಪಿಸಿದ್ದಾರೆ. ಸದರಿ ಕಾರ್ಯಕ್ರಮದಡಿ ಅಂತರ್ಜಲ ಸಂರಕ್ಷಿಸಿಸುವ ಮೂಲಕ ರೈತರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಭೂಮಿಯಿಂದ ಅತಿಯಾಗಿ ಅಂತರ್ಜಲ ಹೊರ ತೆಗೆದಿರುವುದರಿಂದ ನೀರಿನ ಅಭಾವ ಹೆಚ್ಚಾಗಿದೆ. ರೈತರು ಜಮೀನುಗಳಲ್ಲಿ ಅಂತರ್ಜಲ ಬಳಕೆಗಾಗಿ ಹೆಚ್ಚಿನ ಪ್ರವಾಣದಲ್ಲಿ ವಿದ್ಯುತ್, ಪೈಪು ಹಾಗೂ ಯಂತ್ರಗಳನ್ನು ಬಳಕೆ ಡುವಂತಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಅಂತರ್ಜಲ ನಿರ್ವಹಣಾ ವಿವಿಯಲ್ಲಿ ನಮ್ಮ ಇಲಾಖೆಯ ತಜ್ಞರು ವಿಶೇಷ ಅಧ್ಯಯನ ನಡೆಸಿ ಸೆನ್ಸಾರ್ ಸಿಸ್ಟಮ್ ಮೂಲಕ ಅಂತರ್ಜಲ ಸಂರಕ್ಷಣೆ ಹಾಗೂ ಮಿತ ಬಳಕೆ ಬಗ್ಗೆ ವರದಿ ಸಿದ್ಧಪಡಿಸಿದ್ದು ಅದನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ ಎಂದರು.
ನೀರು ಪೋಲು ತಪ್ಪಿಸಲು ಕ್ರಮ: ಮೈಕ್ರೋ ಸಿಸ್ಟಮ್‌ಗೂ ಸೆನ್ಸಾರ್ ಅಳವಡಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಿಂದ ಅನಗತ್ಯವಾಗಿ ನೀರು ಪೋಲು ಆಗುವುದನ್ನು ತಪ್ಪಿಸಬಹುದಾಗಿದೆ. ಜಿಲ್ಲೆಯ ಕೆರೆಗಳಿಗೆ ಶುದ್ಧೀಕರಿಸಿದ ನೀರು ಹರಿಸಿರುವುದರಿಂದ ಅಂತರ್ಜಲ ವದ್ಧಿಸುತ್ತಿದ್ದು, ರೈತರಿಗೆ ಇದರಿಂದ ಲಾಭವಾಗಲಿದೆ ಎಂದರು.ಜಿಲ್ಲೆಯಲ್ಲಿ ಈ ಮುಂಚೆ 1200 ಅಡಿಯಷ್ಟು ಭೂಮಿ ಕೊರೆದರೂ ಅಂತರ್ಜಲ ಲಭ್ಯವಾಗುತ್ತಿರಲಿಲ್ಲ, ಈಗ ಕೊಳವೆ ಬಾವಿಗಳಲ್ಲಿ 300 ರಿಂದ 400 ಅಡಿಗೆ ನೀರು ಸಿಗುತ್ತಿದೆ. ಇನ್ನೆರಡು ವರ್ಷ ಅಂತರ್ಜಲ ಸಂರಕ್ಷಣೆ, ಮಿತ ಬಳಕೆ ಹಾಗೂ ಮರು ಬಳಕೆ ವಾಡಿದಲ್ಲಿ ಮುಂದೆ ಎಲ್ಲೇ ಹೊಸದಾಗಿ ಕೊಳವೆ ಬಾವಿ ಕೊರೆದರೂ 600 ರಿಂದ 700 ಅಡಿಗೆ ನೀರು ಸಿಗುವುದು ಗ್ಯಾರಂಟಿ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನೀರಿನ ಸಮಸ್ಯೆಗೆ ಜನರಲ್ಲಿನ ಸ್ವಾರ್ಥ ಮನೋಭಾವ ಕಾರಣ, ಪ್ರಕತಿಯನ್ನು ನಾಶಪಡಿಸಿದ್ದೇವೆ. ಭೂಮಿಯಲ್ಲಿ ನೀರು ಇಂಗದಂತೆ ಜಲ ಕಣ್ಣುಗಳನ್ನು ಬತ್ತಿಸಿದ್ದೇವೆ. ಇನ್ನಾದರೂ ಜನ ಅಂತರ್ಜಲ ಸಂರಕ್ಷಣೆಗೆ ಗಮನ ಹರಿಸದಿದ್ದರೆ ಉಳಿಗಾಲವಿಲ್ಲ ಎಂದರು.
ಎಡಿಸಿ ಡಾ.ಸ್ನೇಹಾ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮತ್ಯುಂಜಯಸ್ವಾಮಿ, ಪ್ರಧಾನ ಇಂಜಿನಿಯರ್ ಎಚ್.ಎಲ್.ಪ್ರಸನ್ನ, ಅಧೀಕ್ಷಕ ಇಂಜಿನಿಯರ್ ಎನ್.ನಾಗರಾಜ್, ಜಿಲ್ಲಾ ಕಾರ್ಯಪಾಲಕ ಅಭಿಯಂತರ ಪರಮೇಶಗೌಡ, ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ವಿ.ಕುನ್ಹಂಬು, ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಜಿ.ಜಯಣ್ಣ, ಹಿರಿಯ ಭೂವಿಜ್ಞಾನಿ ಎ.ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಇತರರು ಉಪಸ್ಥಿತರಿದ್ದರು.
ರೈತರಿಗೆ ವಿಶೇಷ ಆ್ಯಪ್: ರಾಜ್ಯದ ಎಲ್ಲ ಗ್ರಾಪಂಗಳ ಮುಂದೆ ಸದರಿ ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಅಂತರ್ಜಲ ಕುರಿತು ನಕ್ಷೆ ಅಳವಡಿಸಲಾಗುವುದು. ರೈತರು ಜಮೀನುಗಳಲ್ಲಿ ಲಭ್ಯವಿರುವ ನೀರಿನ ವಾಹಿತಿಯನ್ನು ಮೊಬೈಲ್ ಆ್ಯಪ್‌ನಲ್ಲಿ ಪಡೆಯಬಹುದು. ಅಂತರ್ಜಲ ಇಲಾಖೆಯಿಂದ ಪ್ರಗತಿಗಾಮಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಜ್ಯವನ್ನು ದೇಶಕ್ಕೆ ವಾದರಿಯಾಗಿಸಲು ಸಂಕಲ್ಪ ವಾಡಿರುವುದಾಗಿದೆ ಎಂದು ಜೆ.ಸಿ.ವಾಧುಸ್ವಾಮಿ ಹೇಳಿದರು.
ಅಂತರ್ಜಲ ಅಭಾವದಿಂದ ಕೆಲವು ಕಡೆ 1200 ಅಡಿ ಭೂಮಿ ಕೊರೆದರೂ ನೀರು ಸಿಗುವುದು ಅನುವಾನ. ಹಾಗಾಗಿ 1200 ಅಡಿಗಳ ನಂತರವೂ ಅಂತರ್ಜಲ ಲಭ್ಯತೆ ಬಗ್ಗೆ ಸಂಶೋಧನೆ ನಡೆಸುವಂತೆ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಇಲಾಖೆಯಿಂದ ಅಗತ್ಯ ಸಲಕರಣೆ ಒದಗಿಸಲು ಬದ್ಧ ಜೆ.ಸಿ.ಮಾಧುಸ್ವಾಮಿ, ಸಚಿವ