ಇಂದು ಐದನೇ ಬಾರಿ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆ; ಅಪ್ಪ ಮಗ ಮುಖಾಮುಖಿ!

MLA and Son
Published on

ಬೆಂಗಳೂರು: ಕೆಎಸ್​ಡಿಎಲ್​ನಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್​ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಲ್ಲಿ ಅನೇಕ ರೀತಿಯ ರಾಜಕೀಯ ಬೆಳವಣಿಗೆಗಳು ಉಂಟಾಗಿದ್ದವು. ಜಾಮೀನು ದೊರೆತ ಬಳಿಕವೇ ಕೆಎಸ್​ಡಿಎಲ್ ನಿಗಮದ ಅಧ್ಯಕ್ಷನಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಮುಂದೆ ಹಾಜರಾಗಿದ್ದರು.

ಇಂದು ಐದನೇ ಬಾರಿಗೆ ಮಾಡಾಳ್ ವಿರೂಪಾಕ್ಷಪ್ಪಗೆ ವಿಚಾರಣೆಗೆ ಕರೆಯಲಾಗಿದ್ದು ಈಗಾಗಲೇ ಲೋಕಾಯುಕ್ತ ಪೊಲೀಸರು ಸತತ ನಾಲ್ಕು ದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆ ಮಾಡಿದ್ದಾರೆ.

ಇನ್ನು ಇವತ್ತಿನ ವಿಶೇಷ ಏನಪ್ಪಾ ಎಂದರೆ ಇಂದು ಅಪ್ಪ ಮಗನ ಮುಖಾಮುಖಿ ವಿಚಾರಣೆ ನಡೆಯಲಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರ ವಶದಲ್ಲಿರುವ ಮಾಡಳ್ ಪ್ರಶಾಂತ್ ಹಾಗೂ ಮಾಡಾಳ್ ವಿರೂಪಾಕ್ಷಪ್ಪ, ಇಬ್ಬರನ್ನೂ ಕೂರಿಸಿಕೊಂಡು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net