37 ಜನರಿಗೆ ಹುಚ್ಚುನಾಯಿ ಕಡಿತ

dog
ಡಾಗ್
Published on

ಶಿಕಾರಿಪುರ: ಪಟ್ಟಣದಲ್ಲಿ ಶನಿವಾರ 37 ಜನರಿಗೆ ಹುಚ್ಚುನಾಯಿ ಕಡಿದಿದ್ದು, ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಶನಿವಾರ ಸಂತೆ ದಿನ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಾಗಾಗಿ ನಾಯಿ ಬಹಳಷ್ಟು ಜನರಿಗೆ ಕಚ್ಚಿದೆ. ಜನರು ಹುಚ್ಚು ನಾಯಿಯನ್ನು ಕೊಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳು ಮುಸ್ಸಂಜೆ ಹೊತ್ತಿಗೆ ಶಿಕಾರಿಪುರ ಘನತ್ಯಾಜ್ಯ ಘಟಕದಲ್ಲಿ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರವಿಕುಮಾರ್ ನೇತೃತ್ವದಲ್ಲಿ ಡಾ. ಸಂತೋಷ್, ಡಾ. ವಿಲಾಸ್ ಮರಣೋತ್ತರ ಪರೀಕ್ಷೆ ನಡೆಸಿದರು.
ಹುಚ್ಚುನಾಯಿ ಕಡಿತದಿಂದ ಜನರಲ್ಲಿ ಸ್ವಲ್ಪ ಆತಂಕ ಉಂಟಾಗಿತ್ತು. ಬೀದಿನಾಯಿಗಳ ಹಾವಳಿ ಇರುವ ವಾರ್ಡ್‌ಗಳಲ್ಲಿ ಅವುಗಳನ್ನು ಹಿಡಿಸಲಾಗುವುದು. ನಾಯಿ ಸಾಕಿದವರು ಈ ಬಗ್ಗೆ ಗಮನಹರಿಸಬೇಕು. ಎಲ್ಲೆಂದರಲ್ಲಿ ಅಳಿದುಳಿದ ಆಹಾರ ಪದಾರ್ಥಗಳನ್ನು ಬಿಸಾಡುವುದನ್ನು ಬಿಡಬೇಕು. ಸಾರ್ವಜನಿಕರು ಸಾಕು ನಾಯಿಗಳಿಗೆ ಉಚಿತವಾಗಿ ಸಿಗುವ ರೇಬಿಸ್ ಲಸಿಕೆ ಹಾಕಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಭರತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net