'ಬಾಹುಬಲಿ' ರಾಕೆಟ್ ಯಶಸ್ವಿ ಉಡಾವಣೆ! ಇಸ್ರೋ ಖಾತೆ ಸೇರಿತು ಮತ್ತೊಂದು ಸಾಧನೆ | LVM3-M5 Mission

Untitled design (2)
Published on

LVM3-M5 Mission: ಇಂದು (ನ.02) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಂಜೆ 5:26ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಈ ಉಪಗ್ರಹವನ್ನು ಬಾಹುಬಲಿ ರಾಕೆಟ್​ ಎಂದೇ ಕರೆಯಲ್ಪಡುವ ಎಲ್​ವಿಎಂ3 ಹೊತ್ತೊಯ್ದಿತು.

LVM3-M5 ಬಾಹುಬಲಿ ರಾಕೆಟ್ ಉಡಾವಣೆಗೆ ಕ್ಷಣಗಣನೆ ಪ್ರಕ್ರಿಯೆ ನಿನ್ನೆ ಸಂಜೆಯಿಂದಲೇ ಆರಂಭವಾಗಿತ್ತು. ಈ ಉಪಗ್ರಹದ ಯಶಸ್ವಿ ಉಡಾವಣೆಯು, ಮಾಹಿತಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುತ್ತದೆ. ಅಲ್ಲದೆ, ಸಮುದ್ರ ಹವಾಮಾನ ಪರಿಸ್ಥಿತಿಗಳನ್ನು ತಿಳಿದುಕೊಳ್ಳಬಹುದು. ಇಸ್ರೋ ಈ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಯಶಸ್ವಿಯಾಗಿ ಇರಿಸಿದೆ ಎಂಬುದು ಇಲ್ಲಿ ಗಮನಾರ್ಹ.

ದೈತ್ಯ ರಾಕೆಟ್ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ತಿಳಿಸಿದ್ದಾರೆ. "ಇದಕ್ಕೂ ಮೊದಲು, ಇಸ್ರೋ ವಿಜ್ಞಾನಿಗಳು ಈ ಯಶಸ್ಸನ್ನು ಆಚರಿಸಿದ್ದಾರೆ. ಈ ರಾಕೆಟ್ ಉಡಾವಣೆಯನ್ನು ವೀಕ್ಷಿಸಲು ಅನೇಕ ಶಾಲಾ ವಿದ್ಯಾರ್ಥಿಗಳು ಶ್ರೀಹರಿಕೋಟಕ್ಕೆ ಬಂದಿದ್ದರು. ಅವರ ಸಮ್ಮುಖದಲ್ಲೇ ಉಡಾವಣೆ ಮಾಡಲಾಯಿತು" ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net