ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ಹಲವರು ಪಾರ್ಟಿಗೆಂದೇ ಫ್ಲ್ಯಾಟ್-ರೆಸಾರ್ಟ್ ಮಾಡಿಕೊಂಡಿದ್ದ ವಿಷಯ ಒಂದೊಂದಾಗಿ ಹೊರಬರುತ್ತಿದೆ. ಆ ಪೈಕಿ ಇದೀಗ ಸೇರ್ಪಡೆ ಆಗಿರುವ ಮತ್ತೊಂದು ಹೆಸರು ವೈಭವ್ ಜೈನ್.
ಆರೋಪಿಗಳಲ್ಲಿ ಒಬ್ಬನಾಗಿರುವ ವೈಭವ್ ಜೈನ್, ಮಾದಕ ಚಟುವಟಿಕೆಗಳಿಗೆಂದೇ ವೈಭವೋಪೇತ ಫ್ಲ್ಯಾಟ್ವೊಂದನ್ನು ಇರಿಸಿಕೊಂಡಿದ್ದ ವಿಷಯ ಬಹಿರಂಗಗೊಂಡಿದೆ. ಆ ಐಷಾರಾಮಿ ಫ್ಲ್ಯಾಟ್ ಕುರಿತ ಮಾಹಿತಿ ದಿಗ್ವಿಜಯ್ ನ್ಯೂಸ್ಗೆ ಲಭಿಸಿದೆ.

ಬೆಂಗಳೂರಿಗನ ಹೆಣ್ಣೂರು ಬಳಿ ಇರುವ ಈ ಐಷಾರಾಮಿ ಫ್ಲ್ಯಾಟ್ಗೆ ಯಾರ್ಯಾರೋ ಅಷ್ಟು ಸಲೀಸಾಗಿ ಪ್ರವೇಶಿಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿಗೆ ವೈಭವ್ ಜೈನ್ ಆಪ್ತರಿಗಷ್ಟೇ ಪ್ರವೇಶ. ವಿಶೇಷವೆಂದರೆ, ಬೆಂಗಳೂರಿನ ಸೆಲೆಬ್ರಿಟಿಗಳಲ್ಲದೆ ತೆಲಂಗಾಣದ ರಾಜಕಾರಣಿಗಳ ಮಕ್ಕಳೂ ಇಲ್ಲಿಗೆ ಬರುತ್ತಿದ್ದರು ಎಂಬ ವಿಷಯವೂ ಕೇಳಿಬಂದಿದೆ.
ಎರಡು ಬೆಡ್ ರೂಂ ಮತ್ತು ವಿಶಾಲವಾದ ಹಾಲ್ ಹೊಂದಿರೋ ಫ್ಲ್ಯಾಟ್ನಲ್ಲಿ ವೀಕೆಂಡ್ಗಳಲ್ಲಿ ಭಾರಿ ಪಾರ್ಟಿಗಳು ನಡೆಯುತ್ತಿದ್ದು, ಆಪ್ತವಲಯದ ಸದಸ್ಯರಷ್ಟೇ ಇಲ್ಲಿರುತ್ತಿದ್ದರು ಎನ್ನಲಾಗಿದೆ. ಫ್ಲ್ಯಾಟ್ ಕುರಿತ ಕೆಲವು ಫೋಟೋಗಳ ಝಲಕ್ ಇಲ್ಲಿದೆ.
ಆರೋಪಿಗಳಲ್ಲಿ ಒಬ್ಬನಾಗಿರುವ ಆದಿತ್ಯ ಆಳ್ವ ಒಡೆತನದ "ಹೌಸ್ ಆಫ್ ಲೈಫ್", ನಿರೂಪಕ ಅಕುಲ್ ಬಾಲಾಜಿಗೆ ಸೇರಿರುವ ಫ್ಲ್ಯಾಟ್ ಹೆಸರು ಕೂಡ ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.