ರೈಲ್ವೆಯಲ್ಲೂ ಲಗೇಜ್ ನಿಯಮ

photo-4-68a4c028407b3
Published on

ನವದೆಹಲಿ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ತೂಕ ಪರಿಶೀಲಿಸುವ ಮಾದರಿ ಇನ್ಮುಂದೆ ರೈಲು ನಿಲ್ದಾಣಗಳಿಗೂ ವಿಸ್ತಾರಗೊಳ್ಳಲಿದೆ. ಈ ಹಿಂದೆ ಇದ್ದ ನಿಯಮವನ್ನು ರೈಲ್ವೆ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ.

ನಿಗದಿತ ತೂಕಕ್ಕಿಂತ ಹೆಚ್ಚು ಲಗೇಜ್ ಇದ್ದರೆ ಅದಕ್ಕೆ ಪ್ರಯಾಣಿಕರು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಆರಂಭಿಕ ಹಂತದಲ್ಲಿ ಕೆಲ ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತಂದು, ಬಳಿಕ ದೇಶಾದ್ಯಂತ ವಿಸ್ತರಿಸುವ ಚಿಂತನೆ ಇದೆ. ಪ್ರಯಾಣಿಕರು ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಎಲೆಕ್ಟ್ರಾನಿಕ್ ತೂಕ ಯಂತ್ರದಲ್ಲಿ ಲಗೇಜುಗಳ ತೂಕ ಹಾಕಿಸಬೇಕು. ನಿಗದಿಗಿಂತ ಹೆಚ್ಚು ತೂಕದ ಲಗೇಜುಗಳಿಗೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತದೆ. ತೂಕ ಕಡಿಮೆ ಇದ್ದು ಗಾತ್ರದಲ್ಲಿ ದೊಡ್ಡದಾಗಿದ್ದರೂ ದಂಡ ತೆರಬೇಕಾಗುತ್ತದೆ. ಆದರೆ, ಗಾತ್ರ ಎಷ್ಟು ಮಿತಿಯಲ್ಲಿರಬೇಕು ಎನ್ನುವ ಮಾಹಿತಿ ಇಲಾಖೆ ನೀಡಿಲ್ಲ. ಅನುಮತಿಸಿದ ಲಗೇಜು ತೂಕ, ಎಸಿ ಫಸ್ಟ್ ಕ್ಲಾಸ್ : 70 ಕೆ.ಜಿ, ಎಸಿ ಟೂ ಟಯರ್: 50 ಕೆ.ಜಿ, ಎಸಿ ಥ್ರೀ ಟಯರ್: 40 ಕೆ.ಜಿ, ಸ್ಲೀಪರ್ ಕ್ಲಾಸ್: 40 ಕೆ.ಜಿ ಜನರಲ್ ಕ್ಲಾಸ್: 35 ಕೆ.ಜಿ

ಪ್ರೀಮಿಯಮ್ ಔಟ್​ಲೆಟ್​ಗಳು: ಮಾಲ್​ಗಳಲ್ಲಿ ಕಂಡುಬರುವ ಪ್ರೀಮಿಯಮ್ ಸಿಂಗಲ್ ಬ್ರಾ್ಯಂಡ್ ಔಟ್​ಲೆಟ್​ಗಳು ಮುಂದಿನ ದಿನಗಳಲ್ಲಿ ರೈಲು ನಿಲ್ದಾಣಗಳಲ್ಲೂ ಕಂಡುಬರಲಿವೆ. ಬಟ್ಟೆ, ಪಾದರಕ್ಷೆ, ಎಲೆಕ್ಟ್ರಾನಿಕ್ಸ್ ಇತ್ಯಾದಿ ಉತ್ಪನ್ನಗಳಿಗೆ ಪ್ರತ್ಯೇಕ ಔಟ್​ಲೆಟ್​ಗಳು ತಲೆಎತ್ತಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net