ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಪತ್ತೆಯಾಯ್ತು ಚಿನ್ನದ ಬಿಸ್ಕೆಟ್​ಗಳು!

Gold
Published on

ಲಖನೌ: ಕಸದ ಬುಟ್ಟಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆರು ಚಿನ್ನದ ಬಿಸ್ಕೆಟ್​​ಗಳು ಪತ್ತೆಯಾಗಿರುವ ಘಟನೆ ಲಖನೌದ ಚೌಧರಿ ಚರಣ್​ ಸಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.

ಆರು ಚಿನ್ನದ ಬಿಸ್ಕೆಟ್ಗಳನ್ನು ಕಪ್ಪು ಟೇಪ್​​ನಿಂದ ಸುತ್ತಿ, ಪ್ಲಾಸ್ಟಿಕ್​ ಕವರ್​ನಲ್ಲಿ ಬಚ್ಚಿಟ್ಟು ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಹಾಕಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 36.60 ಲಕ್ಷ ರೂ. ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಚಿನ್ನದ ಬಿಸ್ಕೆಟ್​ಗಳು ಯಾರಿಗೆ ಸೇರಿದ್ದು ಎಂಬುವುದು ಗೊತ್ತಾಗಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ದುಬೈನಿಂದ ಬಂದಿದ್ದ ಕೆಲ ಪ್ರಯಾಣಿಕರನ್ನು ವಿಚಾರಣೆ ಸಹ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯ ತನಿಖೆಯ ಭಾಗವಾಗಿ ನಿಲ್ದಾಣದ ಕೆಲ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ಚಿನ್ನದ ಬಿಸ್ಕೆಟ್ ಅನ್ನು ಕಸದ ಬುಟ್ಟಿಯಲ್ಲಿ ಹಾಕಿದವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net