ಪೊಲೀಸ್​ ಜೀಪ್​ ಹತ್ತಿ ಅನುಚಿತ ವರ್ತನೆ ನಡೆಸಿದ ಪ್ರೇಮಿಗಳು! ವಿಡಿಯೋ ವೈರಲ್​| Police jeep

untitled-design-2025-09-22t110259064-68d0dfa207d2a
Published on

Police jeep: ರಾಜಸ್ತಾನದ ಕೋಟಾದಲ್ಲಿ ಇಬ್ಬರು ಪ್ರೇಮಿಗಳು ಕುಡಿದ ಮತ್ತಿನಲ್ಲಿ ಪೊಲೀಸ್​ ಜೀಪ್​ ಹತ್ತಿ ಹುಚ್ಚಾಟ ಮೆರೆದಿರುವಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ಶುಕ್ರವಾರ (ಸೆಪ್ಟೆಂಬರ್​ 19) ಇಬ್ಬರು ಪ್ರೇಮಿಗಳು ಮಧ್ಯ ರಸ್ತೆಯಲ್ಲಿ ಪೊಲೀಸ್​ ಜೀಪ್​ ಹತ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಕೆಲವು ಸಮಯಗಳವರೆಗೂ ಹೀಗೆ ಮುಂದುವರೆದಿದ್ದು, ತದನಂತರ ಪೊಲೀಸರು ಅವರಿಬ್ಬರನ್ನು ಅಲ್ಲಿಂದ ಕೆಳಗಡೆ ಇಳಿಸಿದ್ದಾರೆ. ಈ ವೇಳೆ ಯುವತಿಯು ಆತನನ್ನು ಬಂಧಿಸಬೇಡಿ ಎಂದು ಗೋಗರೆಯುತ್ತಿದ್ದಾಳೆ. ಇದಾದ ಬಳಿಕ ಪೊಲೀಸರು ಅವರಿಬ್ಬರನ್ನು ಜೀಪಿನಲ್ಲಿ ಠಾಣೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಈ ವಿಡಿಯೋ ತೋರಿಸುತ್ತಿದೆ.

ಘಟನೆ ಏನಂತೀರಾ?

ಶುಕ್ರವಾರ (ಸೆಪ್ಟೆಂಬರ್​ 19) ರಾತ್ರಿ ಈ ಇಬ್ಬರು ಪೊಲೀಸರನ್ನು ನೋಡಿ ಓಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಇವರನ್ನು ಹಿಂಬಾಲಿಸಿ, , ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿಯು ಆತನ ಜೊತೆ ಮದುವೆಯಾಗಲು ಮನೆಯಿಂದ ಓಡಿ ಬಂದಿರುವುದಾಗಿ ಮಾಹಿತಿ ನೀಡಿದ್ದಾಳೆ. ಈ ಘಟನೆ ನಂತರ ಪೊಲೀಸರು ಅವರಿಬ್ಬರನ್ನು ಬಂಧಿಸಿ ಜೀಪಿನೊಳಗೆ ಕೂರಲು ಹೇಳಿದಾಗ ಜೀಪಿನ ಮೇಲೆ ಹತ್ತಿ ಈ ರೀತಿ ಅನುಚಿತ ವರ್ತನೆ ಮಾಡಿರುವುದು ಕಂಡುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ ಯುವಕನಿಗೆ 22 ವರ್ಷವಾಗಿದ್ದು, ಆತ 17 ವರ್ಷದ ಯುವತಿಯನ್ನು ಪ್ರೀತಿಸಿದ್ದು, ಆಕೆಯನ್ನು ಮನೆಯಿಂದ ಓಡಿಬರುವಂತೆ ತಿಳಿಸಿದ್ದಾನೆ. ಇದಾದ ಬಳಿಕ ಮಧ್ಯಸೇವನೆ ಮಾಡಿ, ನಡುರಸ್ತೆಯಲ್ಲಿ ಈ ರೀತಿಯಾಗಿ ಹುಚ್ಚಾಟ ಮೆರೆದಿದ್ದಾರೆ. ಈ ಸಂಬಂಧ ಆತನ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸುದ್ದಿಮೂಲಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net