

Love & War: ಭಾರತೀಯ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ ಸಂಜಯ್ ಲೀಲಾ ಬನ್ಸಾಲಿ ಲವ್ ಎಂಡ್ ವಾರ್ ಎಂಬ ಸಿನಿಮಾದ ಮೇಲೆ ಕಣ್ಣಿಟ್ಟಿದ್ದು, ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ನಂತಹ ತಾರಾ ಬಳಗದೊಂದಿಗೆ ಸಿನಿಮಾ ನಿರ್ಮಾಣ ಹಂತವನ್ನು ಪ್ರವೇಶಿಸಿಸಿದ್ದಾರೆ. ಇನ್ನು ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲು ಮಧ್ಯಪ್ರದೇಶದ ಮ್ಹೌ ಗೆ ಭೇಟಿ ನೀಡಲಿದ್ದಾರೆ.
ಮುಂಬೈನಲ್ಲಿ ಸಿನಿಮಾದ ಆರಂಭಿಕ ಚಿತ್ರೀಕರಣವಾದ ನಂತರ, ನಿರ್ಮಾಣ ತಂಡ ಮಹಾರಾಷ್ಟ್ರದ ಮ್ಹೌ ನಲ್ಲಿ 15 ದಿನಗಳ ಶೂಟಿಂಗ್ ನಡೆಸಲಿದೆ. ಇನ್ನು ಈ ಪ್ರದೇಶವು ಸಿನಿಮಾದ ಕಥೆಗೆ ನ್ಯಾಯ ಒದಗಿಸಲು ಪರಿಪೂರ್ಣ ತಾಣವಾಗಿದೆ.
ಮ್ಹೌ ನ ಪ್ರದೇಶಗಳು ಮಿಲಿಟರಿ ಇತಿಹಾಸವನ್ನು ಹೊಂದಿವೆ. ಈ ಮೊದಲು ಮ್ಹೌ ಬ್ರಿಟಿಷ್ ರಾಜ್ನ ದಕ್ಷಿಣ ಕಮಾಂಡ್ನ ಐದನೇ ವಿಭಾಗದ ಪ್ರಧಾನ ಕಚೇರಿಯಾಗಿತ್ತು. ಈ ಸ್ಥಳವು ವಸಾಹತು ಪೂರ್ವ, ವಾಸ್ತುಶಿಲ್ಪಮತ್ತು ರಚನೆಗಳಿಗೆ ಹೆಸರುವಾಸಿಯಾಗಿದೆ. ಭಾರತದ ಸ್ವಾತಂತ್ರ್ಯದಲ್ಲಿ ಮಹತ್ವ ಸ್ಥಾನವನ್ನು ಪಡೆದಿದೆ.
ಈ ಸಿನಿಮಾವು ಮುಂದಿನ ವರ್ಷ ಮಾರ್ಚ್ 26 ರಂದು ತೆರೆಯ ಮೇಲೆ ಬರಲಿದೆ. ಹಾಗೆಯೇ, ರಾಜ್ ಕಪೂರ್ ಸಂಗಮ್ ರವರ ಸ್ಪೂರ್ತಿ ಪಡೆದ ಈ ಕಥೆಯು ಯುದ್ಧದ ಹಿನ್ನಲೆಯಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆಯನ್ನು ಆಧಾರಿಸುತ್ತಿದೆ.
ಸ್ವಾತಂತ್ರ್ಯಪೂರ್ವದ ಕಥೆಯನ್ನು ಹೊಂದಿರುವ ಈ ಸಿನಿಮಾವು ಆಕರ್ಷಕ ಕಥಾವಸ್ತುಗಳಿಂದ ಸಂಯೋಜಿಸುವ ನಿರೀಕ್ಷೆಯಿದೆ. ಪದ್ಮಾವತ್ ಹಾಗೂ ದೇವದಾಸ್ ಕಥೆಗಳ ಮೂಲಕ ಜನರನ್ನು ಮೂಖರನ್ನಾಗಿ ಮಾಡಿದ್ದ ಬನ್ಸಾಲಿ, ನಿಜ ಜೀವನದ ಜೋಡಿ, ಅಲಿಯಾ ಭಟ್ ಹಾಗೂ ರಣವೀರ್ ಕಪೂರ್ ನೊಂದಿಗೆ ಈ ಚಿತ್ರ ಪ್ರಾರಂಭಿಸಿದ್ದು, ಸಿನಿ ಪ್ರಿಯರು ಈ ಚಿತ್ರದ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ. (ಏಜೆನ್ಸೀಸ್)