BiggBoss ಶುರುವಾದ ಎರಡನೇ ದಿನಕ್ಕೆ ಇಬ್ಬರು ಸ್ಫರ್ಧಿಗಳ ನಡುವೆ ಕುಚ್ ​ಕುಚ್​

BBK 11
Published on

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​-11 (Bigg Boss Season-11) ಆರಂಭವಾಗಿ ಮೂರು ದಿನಗಳಾಗಿದ್ದು, ಕಾರ್ಯಕ್ರಮವು ಈ ಬಾರಿ ಸ್ವರ್ಗ-ನರಕ ಎಂಬ ಥೀಮ್​ನಲ್ಲಿ ನಡೆಯುತ್ತಿದ್ದು, ಸ್ಫರ್ಧಿಗಳು ಒಂದಿಲ್ಲೊಂದು ವಿಚಾರಕ್ಕೆ ಕಿತ್ತಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ.

ಬಿಗ್​ಬಾಸ್ (BiggBoss)​ ಎಂದರೆ ಸ್ಫರ್ಧಿಗಳ ನಡುವೆ ಕಗಳ ಸಾಮಾನ್ಯ. ಅದೇ ರೀತಿ ಪ್ರೀತಿ-ಪ್ರೇಮವೂ ಸಾಮಾನ್ಯವಾಗಿದ್ದು, ಪ್ರತಿ ಸೀಸನ್​ ಯಾವುದಾದರೂ ಸ್ಫರ್ಧಿಗಳು ಜಂಟಿಯಾಗುತ್ತಾರೆ. ಅದೇ ರೀತಿ ಸೀಸನ್​-11ರಲ್ಲಿ ಲವ್ ಸ್ಟೋರಿಯೊಂದು ಪ್ರಾರಂಭ ಆಗುತ್ತಿರುವ ಸೂಚನೆ ಸಿಕ್ಕಿದೆ. ಈ ಹಿಂದಿನ ಆವೃತ್ತಿಗಳನ್ನು ನೋಡುವುದಾದರೆ ಹಲವು ಜೋಡಿಗಳು ಶೋ ಮುಗಿದ ಬಳಿಕವೂ ಜೊತೆಗಿರುವ ಉದಾಹರಣೆಗಳು ಇವೆ.

ಇದೀಗ ಸೀಸನ್​-11ರ ಆರಂಭದಲ್ಲಿ ಲವ್​ಸ್ಟೋರಿ (Love Story) ಶುರುವಾಗುತ್ತಿರುವ ಸೂಚನೆಗಳು ಸಿಕ್ಕಿವೆ. ಸ್ವರ್ಗವಾಸಿಯಾದ ಐಶ್ವರ್ಯಾ ಶಿಂಧೋಗಿ ಹಾಗೂ ನರಕ ವಾಸಿಯಾದ ರಂಜಿತ್​ ನಡುವೆ ಪ್ರೀತಿ ಚಿಗುರೊಡೆಯುವ ಮುನ್ಸೂಚನೆಯನ್ನು ಪ್ರೇಕ್ಷಕರು ಅರಿತಿದ್ದು, ಇದಕ್ಕೆ ಪುರಾವೆಗಳನ್ನು ಹಿಡಿದಿದ್ದಾರೆ. ನಿನ್ನೆ (ಅಕ್ಟೋಬರ್​ 01) ಬೆಳಿಗ್ಗೆ ಸ್ವರ್ಗವಾಸಿಯಾದ ಐಶ್ವರ್ಯಾ ಸಿಂಧೋಗಿ, ತಿಂಡಿ ತಿನ್ನುತ್ತಾ ನರಕದ ಬಳಿ ಹೋದರು. ಅವರನ್ನು ನೋಡಿದ ರಂಜಿತ್, ವಾವ್ ಎಂದೇನೋ ಪ್ರತಿಕ್ರಿಯೆ ನೀಡಿದರು. ಅದಕ್ಕೆ ಐಶ್ವರ್ಯಾ, ‘ನೀವು ನನ್ನನ್ನು ನೋಡಿ ಹೇಳಿದ್ದಾ? ಅಥವಾ ನನ್ನ ತಟ್ಟೆ ನೋಡಿ ಹೇಳಿದ್ದಾ?’ ಎಂದು ಕೇಳಿದರು. ಅದಕ್ಕೆ ರಂಜಿತ್, ‘ಪ್ಲೇಟ್​ಗಿಂತಲೂ ನೀವೇ ಚೆನ್ನಾಗಿದ್ದೀರ’ ಎಂದರು. ಇದು ಐಶ್ವರ್ಯಾ ಸಣ್ಣಗೆ ನಾಚುವಂತೆ ಮಾಡಿತು. ಬಳಿಕ ಐಶ್ವರ್ಯಾ, ‘ನಿಮಗೆ ನಾನು ಬೇಕಾ, ಪ್ಲೇಟ್ ಬೇಕಾ?’ ಎಂದು ಕೇಳಿದ್ದಾರೆ. ಅದಕ್ಕೆ ರಂಜಿತ್, ‘ನೀವೇ ಬೇಕು’ ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿಸಿಕೊಂಡ ಮಾನಸಾ ಓಹ್​ ಎಂದು ಹೇಳಿ ಸುಮ್ಮನಾಗಿದ್ದಾರೆ.

ರಾತ್ರಿ ಸಮಯದಲ್ಲಿ ಐಶ್ವರ್ಯಾ, ನರಕದ ಕಡೆಗೆ ಬಂದಾಗಲೂ ಸಹ ಇದೇ ವಿಷಯ ಚರ್ಚೆ ಆಗಿದೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಉಗ್ರಂ ಮಂಜು, ಧಮ್ ಇದ್ದರೆ ಇವಳನ್ನು ಮುಟ್ಟು ನೋಡೋಣ ಎಂದು ಸವಾಲು ಹಾಕಿದ್ದಾರೆ, ಆಗ ರಂಜಿತ್ ‘ಮನಸ್ಸು ಮಾಡಿದರೆ ಎತ್ತಾಕೊಂಡು ಹೋಗ್ತೀನಿ’ ಎಂದು ಪ್ರತಿಕ್ರಿಯೆ ಕೊಟ್ಟರು, ಇದನ್ನು ಕೇಳಿದ ಐಶ್ವರ್ಯಾ ಹುಸಿ ಕೋಪ ತೋರುತ್ತಾ ಅಲ್ಲಿಂದ ಎದ್ದು ಹೋಗುತ್ತಾರೆ. ಒಟ್ಟಿನಲ್ಲಿ ಈ ಬಾರಿಯ ಬಿಗ್​ಬಾಸ್​ ಆರಂಭದಲ್ಲಿ ಲವ್​ಸ್ಟೋರಿ ಶುರುವಾಗುವ ಮುನ್ಸೂಚನೆ ದೊರೆತಿದ್ದು, ಇದು ಮುಂದುವರೆಯುತ್ತದೆಯೇ ಅಥವಾ ಹಾದಿ ತಪ್ಪುತ್ತದೆಯೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net