Love​​ ಫೇಲ್ಯೂರ್: ಸ್ಟುಡಿಯೋದಲ್ಲೇ ನೇಣಿಗೆ ಶರಣಾದ ಡ್ಯಾನ್ಸ್ ಮಾಸ್ಟರ್

Love​​
Published on

Love Failure: ಪ್ರೇಮ ವೈಫಲ್ಯದಿಂದ ಬೇಸತ್ತ 17 ವರ್ಷದ ಡ್ಯಾನ್ಸ್ ಮಾಸ್ಟರ್ ತಾನು ಕೆಲಸ ಮಾಡುತ್ತಿದ್ದ ಡ್ಯಾನ್ಸ್ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿಯಾಪುರದಲ್ಲಿ ಸೋಮವಾರ ರಾತ್ರಿ (ಮೇ.26) ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಸಾಗರ್ ಎಂದು ಗುರುತಿಸಲಾಗಿದ್ದು, ಮಿಯಾಪುರದ ಡೆಲಾಯ್ಟ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ರಾತ್ರಿಯಲ್ಲಿ ಸ್ಟುಡಿಯೋದ ಒಂದು ರೂಮಿನಲ್ಲೇ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿಸುಕೊಂಡಿದ್ದಾನೆ.

ಸಾಗರ್ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ ಈ ಬಗ್ಗೆ ಇತ್ತೀಚೆಗೆ ಡ್ಯಾನ್ಸ್ ಸ್ಟುಡಿಯೋ ಮಾಲೀಕ ಪರಮೇಶ್ ಜೊತೆ ತನ್ನ ಲವ್​​ ಫೇಲ್ಯೂರ್ ಬಗ್ಗೆ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಸಾಗರ್ ತೀವ್ರ ಅಸಮಾಧಾನಗೊಂಡಿದ್ದರು ಮತ್ತು ಸೋಮವಾರ ರಾತ್ರಿ ಡಾನ್ಸ್​​​​ ಸ್ಟುಡಿಯೋದಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಟುಡಿಯೋ ಮಾಲೀಕರು ಅವರು ಮೃತಪಟ್ಟಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಪ್ರಾರಂಭಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಕಳುಹಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net