

ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ದಿನಕ್ಕೆ ಪ್ರಸಿದ್ಧಿ ಪಡೆದುಬಿಡಬಹುದು. ಇದಕ್ಕೆ ಪ್ರತಿನಿತ್ಯ ಹಲವಾರು ಉದಾಹರಣೆಗಳನ್ನು ನೋಡುತ್ತಲೇ ಇರುತ್ತೇವೆ.
ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳೂ ಪ್ರಖ್ಯಾತಿಯನ್ನು ಪಡೆಯುತ್ತಿವೆ. ಈ ಪಟ್ಟಿಯಲ್ಲಿರುವ ಅಗ್ರ ಪ್ರಾಣಿಗಳೆಂದರೆ ಜಿಫ್ಪಾಮ್ ಗ್ರಂಪೀ ಕ್ಯಾಟ್, ಬಡ್ಡಿ, ಬೂ, ನಾಲಾ ಕ್ಯಾಟ್. ಇತ್ತೀಚೆಗೆ ಈ ಪಟ್ಟಿಗೆ ಹೊಸ ಪ್ರಾಣಿಯೊಂದು ಸೇರ್ಪಡೆಯಾಗಿದೆ.
‘ಕ್ಯಾಟ್’ ಎಂಬ ಹೆಸರಿನ ಈ ಬೆಕ್ಕು ಮೂರು ತಿಂಗಳ ಮರಿಯಾಗಿದ್ದಾಗ ಈವ್ ಎಂಬಾಕೆ ದತ್ತು ಪಡೆದಿದ್ದರು. ಅದಕ್ಕೆ ಈಗ 18 ತಿಂಗಳು ತುಂಬಿದೆ. ಅರ್ಧ ಬಿಳಿ ಅರ್ಧ ಕಂದು ಬಣ್ಣದ ಈ ಬೆಕ್ಕಿನ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆಯೂ ಇದೆ. ಕೇವಲ ಹತ್ತೇ ದಿನಗಳಲ್ಲಿ ಇದಕ್ಕೆ ನಾಲ್ಕು ಸಾವಿರ ಫಾಲೋವರ್ಸ್ ಸೃಷ್ಟಿಯಾಗಿದ್ದಾರೆ.