ವಸತಿ ಶಾಲೆಗೆ ಬೆಂಕಿ ಹಚ್ಚಿ, ಮನಬಂದಂತೆ ಗುಂಡು ಹಾರಿಸಿದ ಬಂಡುಕೋರರು

uganda
Published on

ಕಂಪಾಲಾ: ಶಾಲೆಯೊಂದರ ಮೇಲೆ ದಾಳಿ ನಡೆದು ಕನಿಷ್ಠ 25 ಜನರು ಮೃತಪಟ್ಟು, 8 ಜನರು ಗಾಯಗೊಂಡಿರುವ ಭೀಕರ ಘಟನೆ ಉಗಾಂಡಾದ ಕಂಪಾಲಾದಲ್ಲಿ ನಡೆದಿದೆ.

ಐಸಿಸ್​ ಉಗ್ರಗಾಮಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಅಲೈಡ್ ಡೆಮಾಕ್ರಟಿಕ್ ಫೋರ್ಸ್‌ನ ಸಶಸ್ತ್ರ ಬಂಡುಕೋರರು ಶುಕ್ರವಾರ ರಾತ್ರಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಉಗಾಂಡಾದ ಕಂಪಾಲಾ ಗಡಿಯಲ್ಲಿರುವ ಎಂಪಾಂಡ್ವೆಯಲ್ಲಿರುವ ಲುಬಿರಿರಾ ಮಾಧ್ಯಮಿಕ ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಜನವರಿ 1 ರಂದು ಜಯದೇವ ಹೃದ್ರೋಗ ಸಂಸ್ಥೆಯ ಕಲಬುರಗಿ ನೂತನ ಕಟ್ಟಡ ಲೋಕಾರ್ಪಣೆ

ಬಂಡುಕೋರರು ವಸತಿ ನಿಲಯಕ್ಕೆ ಬೆಂಕಿ ಹಚ್ಚಿದ ವೇಳೆ ಕೆಲವು ವಿದ್ಯಾರ್ಥಿಗಳಿಗೆ ಮಾರಣಾಂತಿಕ ಸುಟ್ಟಗಾಯಗಳಾಗಿವೆ. ಅಲ್ಲದೇ, ಪ್ರದೇಶದಲ್ಲಿದ ಜನರ ಮೇಲೆ ಬಂಡುಕೋರರು ಗುಂಡು ಹಾರಿಸಿ, ಇನ್ನು ಕೆಲವರನ್ನು ಮಾರಕಾಸ್ತ್ರಗಳಿಂದ ಕತ್ತರಿಸಿ ಹತ್ಯೆಗೈದಿದ್ದಾರೆ. ಅಲ್ಲದೇ, ದಾಳಿಯ ನಂತರ ಸರಂಧ್ರ ಗಡಿಯ ಮೂಲಕ ಕಾಂಗೋಗೆ ಓಡಿಹೋದ ಬಂಡುಕೋರರು ಅಪರಿಚಿತ ಸಂಖ್ಯೆಯ ಜನರನ್ನು ಅಪಹರಿಸಿದ್ದಾರೆ.

ಉಗಾಂಡಾ ಪೋಲೀಸ್ ಫೋರ್ಸ್ ವಕ್ತಾರ ಫ್ರೆಡ್ ಎನಂಗಾ ಈ ಕುರಿತು ಮಾಹಿತಿಯನ್ನು ನೀಡಿದ್ದು, ವಿದ್ಯಾರ್ಥಿಗಳ ವಸತಿ ನಿಲಯವನ್ನು ಸುಟ್ಟು ಹಾಕಿ, ಆಹಾರದ ಗೋದಾಮನ್ನು ಲೂಟಿ ಮಾಡಲಾಗಿದೆ. ಇದುವರೆಗೆ 25 ಮೃತದೇಹಗಳನ್ನು ಶಾಲೆಯಿಂದ ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವರನ್ನು ಬ್ರವೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net