ಲಾಸ್ ಏಂಜಲೀಸ್ ಬೆಂಕಿಯ ಕೆನ್ನಾಲಿಗೆಯಲ್ಲಿ ಹೊತ್ತಿ ಉರಿಯಲು ಮೀನುಗಳು ಕಾರಣ! Los Angeles Wildfires

losangeles
Published on

ಅಮೆರಿಕಾ :  ( Los Angeles Wildfires ) ಕಾಡ್ಗಿಚ್ಚು ಅಮೆರಿಕದ ಮಹಾನಗರ ಲಾಸ್ ಏಂಜಲೀಸ್ ಅನ್ನು ಸುಟ್ಟುಹಾಕಿದೆ. ಸುಮಾರು 10 ಸಾವಿರ ಕಟ್ಟಡ, 12.9 ಲಕ್ಷ ಕೋಟಿ ರೂ. ಆಸ್ತಿ ನಷ್ಟವನ್ನು ಸೃಷ್ಟಿಸಿದೆ.  ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ವಿಶ್ವದ ಅತಿ ದೊಡ್ಡ ಬನ್ನಿ  ಮ್ಯೂಸಿಯಂ ಕೂಡ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಈ ಮ್ಯೂಸಿಯಂನಲ್ಲಿ ಮೊಲ ಹಾಗೂ 46 ಸಾವಿರ ವಸ್ತುಗಳು ಸುಟ್ಟು ಕರುಕಲಾಗಿದೆ. ಲಾಸ್ ಏಂಜಲೀಸ್‌ನ ಪಾಲಿಸೇಡ್ಸ್ ಫೈರ್ ಮತ್ತು ಈಟನ್ ಫೈರ್ ಪ್ರದೇಶಗಳಲ್ಲಿ ಸುಮಾರು 35,000 ಎಕರೆ ಅರಣ್ಯ ಸುಟ್ಟುಹೋಗಿದೆ. ಶ್ರೀಮಂತರು ಮತ್ತು ಹಾಲಿವುಡ್ ತಾರೆಯರು ಬಿಟ್ಟು ಹೋದ ಮನೆಗಳಲ್ಲಿ ಕಳ್ಳರು  ಬರುತ್ತಿದ್ದಾರೆ. ಈವರೆಗೆ ಸುಮಾರು 20 ಕಳ್ಳರನ್ನು ಬಂಧಿಸಲಾಗಿದೆ. ಲಾಸ್ ಏಂಜಲೀಸ್ ನಗರ ಎದುರಿಸುತ್ತಿರುವ ಈ ದುಸ್ಥಿತಿಗೆ ಪುಟ್ಟ ಮೀನು ಕಾರಣ ಎಂದು ಚರ್ಚೆಯಾಗುತ್ತಿದೆಯೇ?  ನಾವು ಇಂದು ಈ ಕುರಿತಾಗಿ ತಿಳಿದುಕೊಳ್ಳೋಣ...

'ಡೆಲ್ಟಾ ಸ್ಮೆಲ್ಟ್' ಎಟಿಎಂ ಕಾರ್ಡ್ ಗಾತ್ರದ ಅಪರೂಪದ ಮೀನು. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಈ ಮೀನನ್ನು ಉಳಿಸಲು ಮಾಡಿದ ತಪ್ಪಿನಿಂದಾಗಿ ಲಾಸ್ ಏಂಜಲೀಸ್ ನಗರ ಬೆಂಕಿಯಲ್ಲಿ ಸಿಲುಕಿಕೊಂಡಿದೆ ಎಂದು ಯುನೈಟೆಡ್ ಸ್ಟೇಟ್ಸ್‌ನ ಭವಿಷ್ಯದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

ಸ್ಯಾನ್ ಜೋಕ್ವಿನ್.. ಕ್ಯಾಲಿಫೋರ್ನಿಯಾದ ಜೀವನದಿ.. 589 ಕಿ.ಮೀ ಉದ್ದ ಹರಿಯುವ ಉದ್ದನೆಯ ನದಿ. ಇದೇ ನದಿ ಪಾತ್ರದಲ್ಲೇ ವಿಶಿಷ್ಟ ಅನಿಸೋ ಮೀನು ಜೀವಿಸುತ್ತದೆ. ಅದುವೇ ಡೆಲ್ಟಾ ಸ್ಮೆಲ್ ಅನ್ನೋ ಎಟಿಎಂ ಕಾರ್ಡ್ ಗಾತ್ರದ ಮೀನು. ಹೈಫೋಮೆಸಸ್ ಟ್ರಾನ್ಸ್​ಪಾಸಿಫಿಕಸ್ ಅನ್ನೋ ವೈಜ್ಞಾನಿಕ ಹೆಸರಿನ ಮೀನಿನ ಸಂತತಿಯೇ ಕ್ಷೀಣವಾಗುತ್ತಿದೆ ಅಂತ ಕ್ಯಾಲಿಫೋರ್ನಿಯನ್ನರು ಇತ್ತೀಚೆಗೆ ಅಭಿಯಾನವನ್ನೇ ಮಾಡಿದ್ರು.. ಹಾಗಾಗಿಯೇ ಫೆಡರಲ್ ಸರ್ಕಾರ ಕ್ಯಾಲಿಫೋರ್ನಿಯಾಕ್ಕೆ ಹೆಚ್ಚುವರಿ ನೀರು ಸರಬರಾಜು ಮಾಡೋದಕ್ಕೆ ಕಡಿವಾಣ ಹಾಕಿತ್ತು. ಇದೇ ತಪ್ಪೇ ಇವತ್ತು ಹಾಲಿವುಡ್​ ಸುಟ್ಟು ಬೂದಿ ಆಗುವಂಥಾ ಕಾಡ್ಗಿಚ್ಚು ಸೃಷ್ಟಿಯಾಗೋದಕ್ಕೆ ಕಾರಣ ಅಂತ ಖುದ್ದು ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರೋ ಡೋನಾಲ್ಡ್​ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಲಾಸ್ ಏಂಜಲೀಸ್ ನಗರದ ಹೊರವಲಯದಲ್ಲಿರುವ ನೀರಿನ ಸರೋವರಗಳಲ್ಲಿ ಈ ಜಾತಿಯ ಮೀನುಗಳು (Wildfires Vs Fish) ಹೆಚ್ಚಿನ ಸಂಖ್ಯೆಯಲ್ಲಿವೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರನ್ನು ಉಳಿಸಲು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರು. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಲಾಸ್ ಏಂಜಲೀಸ್ ನಗರದ ಹೊರವಲಯದಲ್ಲಿರುವ ನದಿಗಳಿಂದ ನೀರನ್ನು ಸರೋವರಗಳಿಗೆ ತಿರುಗಿಸುವ ಒಪ್ಪಂದಕ್ಕೆ ಸಹಿ ಹಾಕಿಲ್ಲ. ರಾಜ್ಯಪಾಲರ ಈ ನಿರ್ಧಾರದಿಂದ ಲಾಸ್ ಏಂಜಲೀಸ್ ನಗರ ಹೊತ್ತಿ ಉರಿಯುತ್ತಿದ್ದರೆ ಬೆಂಕಿ ನಂದಿಸಲು ನೀರಿಲ್ಲದಂತಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಸ್ಯಾಂಟ ಅನ ಅನ್ನೋದು ಶರದೃತುವಿನಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾವನ್ನು ಅಕ್ಷರಶಃ ನಡುಗಿಸೋ ಒಣ ಹಬೆ ಗಾಳಿ.. ಇದೇ ಸ್ಯಾಂಟ ಅನ ಅನ್ನೋ ಒಣ ಹಬೆ ಗಾಳಿಗೆ ಅಮೆರಿಕನ್ನರು ಡೆವಿಲ್ ವಿಂಡ್ಸ್​ ಅಂತಲೂ ಕರೀತಾರೆ. ವರ್ಷದಲ್ಲಿ ಕನಿಷ್ಟ 10-25 ಸಲ ಕರಾವಳಿ ಕ್ಯಾಲಿಫೋರ್ನಿಯಾ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯಾವನ್ನು ಸುಟ್ಟು ಹಾಕೋ ಮಟ್ಟಿಗೆ ಅಬ್ಬರಿಸುತ್ತದೆ. 1957ರಲ್ಲೂ ಇದೇ ಸ್ಯಾಂಟ ಅನ ಅನ್ನೋ ಒಣ ಹಬೆಯ ಬಿಸಿ ಗಾಳಿ 25 ಸಾವಿರ ಎಕರೆ ಕಾಡನ್ನು ಮುಕ್ಕಿ ಕೆಡವಿತ್ತು. ಇದೀಗ ಮತ್ತೊಮ್ಮೆ ಇದೇ ಸ್ಯಾಂಟ ಅನ ಅನ್ನೋ ಬಿಸಿ ಗಾಳಿ ಲಾಸ್​ ಏಂಜಲೀಸ್​​ ಪಾಲಿಗೆ ಭಸ್ಮಾಸುರನೇ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net