ಕಲಾ ವಿಭಾಗದಲ್ಲಿ ಲಾರಿ ಡ್ರೈವರ್ ಮಗಳು ಸಂಜನಾಬಾಯಿ ರಾಜ್ಯಕ್ಕೆ ಪ್ರಥಮ | Sanjanabai

dk - 2025-04-08T132220.045
Published on: 

Karnataka 2nd PUC Result 2025 : ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು (ಏಪ್ರಿಲ್ 08) ಮಧ್ಯಾಹ್ನ 12.50ಕ್ಕೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಲಾರಿ ಡ್ರೈವರ್ ಮಗಳು ಸಂಜನಾಬಾಯಿ(Sanjanabai) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ವಿಜಯನಗರ ಜಿಲ್ಲೆಯ(ಬಳ್ಳಾರಿ) ಕೊಟ್ಟೂರು ತಾಲೂಕಿನಲ್ಲಿರುವ ಇಂದು ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಂಜನಾಬಾಯಿ 600ರಕ್ಕೆ 597 ಅಂಕ ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದರೆ, ಕಾಮರ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಮೊದಲ ರಾಂಕ್ ಗಳಿಸಿದ್ದಾರೆ.