

ನವದೆಹಲಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಗವಾನ್ ಜಗನ್ನಾಥನ ಕೃಪೆಯಿಂದ ರಕ್ಷಿಸಲ್ಪಟ್ಟರು ಎಂದು ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞೆಯ (ಇಸ್ಕಾನ್) ಪ್ರತಿನಿಧಿ ಸೋಮವಾರ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕ್ಯೂಆರ್ ಕೋಡ್ ಬಳಸಿ ಕಾಶಿ ವಿಶ್ವನಾಥ ದೇಗುಲ ಪ್ರವೇಶ
ಈ ಹಿಂದೆ ಅಮೆರಿಕದಲ್ಲಿ ಜಗನ್ನಾಥ ರಥಯಾತ್ರೆಗೆ ಡೊನಾಲ್ಡ್ ಟ್ರಂಪ್ ಬೆಂಬಲ ನೀಡಿದ್ದರು. ಈಗ ಜಗನ್ನಾಥ ದೇವರ ರಥಯಾತ್ರೆ ನಡೆಯುತ್ತಿರುವಾಗ ಟ್ರಂಪ್ ಮೇಲೆ ದುಷ್ಕರ್ಮಿ ದಾಳಿ ಮಾಡಿದರೂ ಅವರು ಬದುಕುಳಿದಿರುವುದು ಆ ಸ್ವಾಮಿಯಿಂದಲೇ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 48 ವರ್ಷಗಳ ಹಿಂದೆ, ಅಂದರೆ ಜುಲೈ 1976 ರಲ್ಲಿ ಇಸ್ಕಾನ್ ನಿಂದ ಜಗನ್ನಾಥ ದೇವರ ರಥ ಯಾತ್ರೆ ಆಯೋಜಿಸಲು ನಿರ್ಧರಿಸಲಾಯಿತು. ರಥಗಳನ್ನು ಮಾಡಲು ವಿಶಾಲವಾದ ಸ್ಥಳಾವಕಾಶ ಬೇಕಿತ್ತು. ಆಗ ಅದಕ್ಕಾಗಿ ನ್ಯೂಯಾರ್ಕ್ ಸಿಟಿಯೆಲ್ಲ ಹುಡುಕಿದೆವು. ಆದರೆ ಅಷ್ಟು ಜಾಗ ಸಿಗಲಿಲ್ಲ. ಆ ವೇಳೆ ಡೊನಾಲ್ಡ್ ಟ್ರಂಪ್ ಅವರನ್ನು ಇಸ್ಕಾನ್ ಸಂಪರ್ಕಿಸಿತ್ತು ಎಂದು ನೆನಪಿಸಿದರು.
ಟ್ರಂಪ್ ಅವರು ರೈಲು ಅಂಗಳವನ್ನು ಬಳಸಿಕೊಳ್ಳಬಹುದು ಎಂದು ಇಸ್ಕಾನ್ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ. ಮತ್ತೊಂದೆಡೆ, ಇದೇ ಸಮಯದಲ್ಲಿ ಜಗನ್ನಾಥನ ರಥಯಾತ್ರೆಗಳು ವಿಶ್ವದಾದ್ಯಂತ ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಸ್ಕಾನ್ ಪ್ರತಿನಿಧಿ ತಮ್ಮ ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿದ್ದು, ಅವರನ್ನು ಪಾರುಮಾಡಿರುವುದು ಅದೇ ಸ್ವಾಮಿಯೇ ಎಂದು ಪೋಸ್ಟ್ ಮಾಡಿದ್ದಾರೆ.
2024ರ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಟ್ರಂಪ್ ರಿಪಬ್ಲಿಕನ್ ಪಕ್ಷದ ಪರವಾಗಿ ಭಾನುವಾರ ಪೆನ್ಸಿಲ್ವೇನಿಯಾದ ಬಟ್ಲರ್ ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬಅವರ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಟ್ರಂಪ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಅವರ ಬಲ ಕಿವಿಗೆ ಗಾಯವಾಗಿದೆ.