ಇವರೇ ನೋಡಿ ತೆಲುಗು ಬಿಗ್​ಬಾಸ್​ ಮೆನೆಗೆ ಎಂಟ್ರಿ ಕೊಟ್ಟ ಕನ್ನಡದ ನಟಿಯರು! Bigg Boss 9 Telugu

Boss 9 Telugu
Published on

Bigg Boss 9 Telugu : ತೆಲುಗಿನ ಬಿಗ್​ಬಾಸ್​​ ಸೀಸನ್ 9 ಸೆಪ್ಟೆಂಬರ್ 7 ರ ಭಾನುವಾರ ಸಂಜೆ 7 ಗಂಟೆಗೆ ಅದ್ದೂರಿಯಾಗಿ ಪ್ರಾರಂಭವಾಯಿತು. ಈ ಬಾರಿ ಒಟ್ಟು 15 ಸ್ಪರ್ಧಿಗಳು ಮನೆ ಪ್ರವೇಶಿಸಿದ್ದು, ತೆಲಗು ಬಿಗ್​ಬಾಸ್​​ ಮೆನೆಗೆ ಕನ್ನಡ ಸೆಲೆಬ್ರಿಟಿಗಳು ಇದ್ದಾರೆ ಎನ್ನುವುದು ವಿಶೇಷವಾಗಿದೆ.

ಸಂಜನಾ ಗಲ್ರಾನಿ 

ಸ್ಯಾಂಡಲ್​​ವುಡ್​​ ನಟಿ ಸಂಜನಾ ಗಲ್ರಾನಿ ಅವರು ಡಾರ್ಲಿಂಗ್​​ ಪ್ರಭಾಸ್​​ ಅವರ ಬುಜ್ಜಿಗಾಡು ಸಿನಿಮಾದಲ್ಲಿ ನಟಿಸುವ ಮೂಲಕವಾಗಿ ತೆಲಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ಇವರು ಈಗ ತೆಲಗು ಬಿಗ್​ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ ಕನ್ನಡ ಬಿಗ್​ಬಾಸ್​​ ಆರಂಭದ ಸೀಸನ್​​ನಲ್ಲಿ ಕಾಣಿಸಿಕೊಂಡಿದ್ದರು. ಸಂಜನಾ ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಪ್ಲೋರಾ ಸೈನಿ ( ಆಶಾ ಸೈನಿ)

ಚಂಡಿಗಂಡದ ನಿವಾಸಿಯಾಗಿರುವ ಫ್ಲೋರಾ ಸೈನಿ 2ನೇ ಸ್ಪರ್ಧಿಯಾಗಿ ಬಿಗ್​ಬಾಸ್​​ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಪ್ರೇಮ ಕೋಸಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದಿರುವ ಈ ನಟಿ ಸಾಕಷ್ಟು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್​​ ಹಾಗೂ ರವಿಚಂದ್ರನ್​​ ಅಭಿನಯದ ಕೋದಂಡರಾಮ ಚಿತ್ರದಲ್ಲಿ ಸಂಗೀತಾ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರವಿದ್ದ ನಂತರ, ಅವರು ಈಗ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮರುಪ್ರವೇಶ ಮಾಡಲು ಪ್ರಯತ್ನಿಸುತ್ತಿದ್ದಾರೆ.

ತನುಜಾ ಗೌಡ: ( ತನುಜಾ ಪಟ್ಟಸ್ವಾಮಿ)

ತೆಲಗು ಮತ್ತು ಕನ್ನಡ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಇವರು ಕನ್ನಡದ 6-5=3 ಸಿನಿಮಾ ಮೂಲಕವಾಗಿಯೂ ಸ್ಯಾಂಡಲ್​ವುಡ್​​ಗೆ ಪರಿಚಿತರಾಗಿದ್ದಾರೆ.

ಮುದ್ದ ಮಂದಾರಂ ಧಾರಾವಾಹಿಯ ಮೂಲಕ ಅವರು ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಅವರು ಈ ಹಿಂದೆ ಜತಿರತ್ನಲು ಜೊತೆ ಸ್ಟಾರ್ ಮಾಲೋ ಕುಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಕಲ್ಯಾಣ್ ಪದಲ  - ಇವರು ಈ ಹಿಂದೆ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಇನ್‌ಫ್ಲುಯೆನ್ಸರ್ ಆಗಿದ್ದಾರೆ.
  • ಹರಿತ ಹರೀಶ್  - ಮಾಸ್ಕ್ಡ್ ಕಾಮಿಡಿ ಸ್ಕಿಟ್‌ಗಳಿಂದಲೇ ಹೆಸರುವಾಸಿ ಆಗಿರುವ ಯೂಟ್ಯೂಬರ್.
  • ಡೆಮನ್ ಪವನ್ - ಫಿಟ್ನೆಸ್ ಕ್ರಿಯೇಟರ್.
  • ಶ್ರೀಜಾ ದಮ್ಮು - ಲೈಫ್‌ ಸ್ಟೈಲ್‌ ಮತ್ತು ಡ್ಯಾನ್ಸ್ ವ್ಲಾಗರ್.
  • ಡಾ ಪ್ರಿಯಾ - ವೃತ್ತಿಯಲ್ಲಿ ವೈದ್ಯೆ.
  • ಮರ್ಯಾದಾ ಮನೀಶ್ - ಇನ್‌ಫ್ಲುಯೆನ್ಸರ್‌.
  • ಭರಣಿ ಶಂಕರ್ - ‘ಕಾರ್ತಿಕ ದೀಪಂ’ ಧಾರಾವಾಹಿಯ ನಟ.
  • ಜಬರ್‌ದಸ್ತ್ ಇಮ್ಯಾನ್ಯುಯೆಲ್ - ‘ಜಬರ್‌ದಸ್ತ್‌’ ಶೋದ ಕಾಮಿಡಿಯನ್.
  • ಸುಮನ್ ಶೆಟ್ಟಿ - ಖ್ಯಾತ ಹಾಸ್ಯ ಕಲಾವಿದ.
  • ರಾಮು ರಾಥೋಡ್ - ಜನಪದ ಕಲಾವಿದ.
  • ಶ್ರಾಸ್ತಿ ವರ್ಮ - ಜಾನಿ ಮಾಸ್ಟರ್ ಬಳಿ ಸಹಾಯಕ ಕೊರಿಯೋಗ್ರಾಫರ್‌ ಆಗಿದ್ದವರು ಶ್ರಾಸ್ತಿ ವರ್ಮ.
  • ರಿತು ಚೌಧರಿ - ‘ಪ್ರೇಮ ಎಂಥಾ ಮಧುರಂ’ ನಟಿ ರಿತು ಚೌಧರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net