ಲಾಂಗ್​ ಜಳಪಿಸಿದ ದುರುಳರು

Crime Logo
Published on

ಕೋಲಾರ/ಕೆಜಿಎಫ್​: ಲಾಂಗ್​ ಹಿಡಿದು ಪುಂಡಾಟಿಕೆ ನಡೆಸಿ, ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಎಸ್​ಟಿ ಬ್ಲಾಕ್​ನಲ್ಲಿ 2 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ ಪುಡಿ ರೌಡಿಗಳ ಗುಂಪನ್ನು ಹೆದರಿಸಲು ಯುವಕರ ಪಡೆಯೊಂದು ಲಾಂಗ್​ಗಳನ್ನು ಹಿಡಿದು ಬಡಾವಣೆಗಳಲ್ಲಿ ಓಡಾಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬೆನ್ನಲ್ಲೇ, ಹಿರಿಯ ಪೊಲೀಸ್​ ಅಧಿಕಾರಿಗಳು ಹಾಡುಹಗಲೇ ಲಾಂಗ್​, ಮಚ್ಚು ಹಿಡಿದು ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಆಂಡ್ರಸನ್​ಪೇಟೆಯಲ್ಲಿ ವ್ಯಾಪಾರಿಗಳಿಗೆ ಪುಡಿ ರೌಡಿಗಳು ಬೆದರಿಕೆ ಹಾಕುವ ಘಟನೆಗಳು ಆಗಾಗ ಸಂಭವಿಸುತ್ತಿದ್ದು, ಇಂತಹವರನ್ನು ಮಟ್ಟ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net