ಬಸವನಬಾಗೇವಾಡಿ ಬಸವೇಶ್ವರ ಬ್ಯಾಂಕಿಗೆ ಲೋಕನಾಥ ಅಗರವಾಲ ಅವಿರೋಧ ಆಯ್ಕೆ

loknath-agrawal-unopposed-for-basavanbagewadi-basaveshwar-bank
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ಕೋ ಆಪ್‌ರೇಟಿವ್ ಬ್ಯಾಂಕಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಲೋಕನಾಥ ಅಗರವಾಲ ಅವರನ್ನು ಸಹಕಾರಿ ಮಹಾಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಈರಣ್ಣ ಪಟ್ಟಣಶೆಟ್ಟಿ, ಶಿವನಗೌಡ ಬಿರಾದಾರ, ಬಾಲಚಂದ್ರ ಮುಂಜಾನೆ ಇತರರಿದ್ದರು.
Published on

ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ಕೋ ಆಪ್‌ರೇಟಿವ್ ಬ್ಯಾಂಕಿಗೆ ಲೋಕನಾಥ ಅಗರವಾಲ ಸತತ 5 ನೇ ಬಾರಿ ಅಧ್ಯಕ್ಷರಾಗಿ ಲೋಕನಾಥ ಅಗರವಾಲ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಗೊಳಸಂಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಶ್ರೀಶೈಲ ಹಂಗರಗಿ ಘೋಷಣೆ ಮಾಡಿದರು.

ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಬ್ಯಾಂಕಿನ ಸಭಾ ಭವನದಲ್ಲಿ ಗುರುವಾರ ಜರುಗಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಬ್ಯಾಂಕಿನ ಪ್ರಗತಿಗೆ ಲೋಕನಾಥ ಅಗರವಾಲ ಅವರ ಕೊಡುಗೆ ಅಪಾರವಾಗಿದೆ. ನಷ್ಟದಲ್ಲಿದ್ದ ಬ್ಯಾಂಕ್‌ನ್ನು ಉನ್ನತ ಮಟ್ಟಕ್ಕೆ ತಂದು ಅಂದಾಜು ಮೂರು ದಶಕಗಳಿಂದ ಅವರು ಅಧ್ಯಕ್ಷರಾಗಿ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯದಿಂದ ಬ್ಯಾಂಕಿನ ಪ್ರಗತಿಗೆ ನಿಸ್ವಾರ್ಥವಾಗಿ ದುಡಿಯುತಿದ್ದಾರೆ. ಬ್ಯಾಂಕಿನ ಪ್ರಗತಿಗೆ ಲೋಕನಾಥ ಅಗರವಾಲ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಮಾ ಸಹಕಾರಿ ಮಹಾಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ ಮಾತನಾಡಿ, ಬ್ಯಾಂಕಿನ ಸಂಸ್ಥಾಪಕರಾದ ಆರ್.ಎಂ.ದುಂಬಾಳಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಲೋಕನಾಥ ಅಗರವಾಲ ಅವರು ಬ್ಯಾಂಕಿನ ಪ್ರಗತಿಗೆ ಗ್ರಾಹಕರಿಗೆ ಸ್ಪಂದಿಸಿದ್ದಾರೆ. ಆಡಳಿತ ಮಂಡಳಿಯ ನಿರ್ದೇಶಕರ ಸಲಹೆ ಸೂಚನೆಗಳನ್ನು ಪಡೆದು ಸಿಬ್ಬಂದಿ ಸಹಕಾರದೊಂದಿಗೆ ರಿಜರ್ವ್ ಬ್ಯಾಂಕಿನ ನಿಯಮಾನುಸಾರವಾಗಿ ಕಳೆದ 25 ವರ್ಷಗಳಿಂದ ಬ್ಯಾಂಕಿನ ಅಧ್ಯಕ್ಷರಾಗಿ ಅಂದಾಜು 38 ವರ್ಷದಿಂದ ನಿರ್ದೇಶಕರಾಗಿ ಬ್ಯಾಂಕ್‌ನ್ನು ಲಾಭದತ್ತ ನಡೆಸಿದ್ದಾರೆ. ಸದ್ಯ ಅವರು ಮೊತ್ತೊಮ್ಮೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ಬ್ಯಾಂಕಿನ ನೂತನ ಅಧ್ಯಕ್ಷ ಲೋಕನಾಥ ಅಗರವಾಲ ಮಾತನಾಡಿ, ಅಂದಾಜು 38 ವರ್ಷಗಳಿಂದ ಬ್ಯಾಂಕಿನ ನಿರ್ದೇಶಕನಾಗಿ 5ನೇ ಅವಧಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ. ನನ್ನ ಮೇಲೆ ವಿಶ್ವಾಸವನ್ನಿಟ್ಟು ಅಧ್ಯಕ್ಷನಾಗಿ ಸೇವೆ ಮಾಡಲು ಸಹಕರಿಸಿದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಎಲ್ಲ ಸಹಕಾರಿ ಮುಖಂಡರಿಗೆ ಧನ್ಯವಾದಗಳು ಎಂದರು.

ಜನತಾ ಬಜಾರ ಅಧ್ಯಕ್ಷ ಬಾಲಚಂದ್ರ ಮುಂಜಾನೆ, ನಿರ್ದೇಶಕ ಶಂಕರಗೌಡ ಬಿರಾದಾರ, ಅನಿಲ ದುಂಬಾಳಿ, ನೀಲು ನಾಯಕ, ಉಮೇಶ ಹಾರಿವಾಳ, ಜಗದೀಶ ಕೊಟ್ರಶೆಟ್ಟಿ, ಸಿದ್ರಾಮ ಕಿಣಗಿ, ಶ್ರೀಶೈಲ ಪತ್ತಾರ, ಶಿವಾನಂದ ಪಟ್ಟಣಶೆಟ್ಟಿ, ಕಮಲಾ ತಿಪ್ಪನಗೌಡರ, ಸುರೇಖಾ ಪಡಶೆಟ್ಟಿ, ಬ್ಯಾಂಕಿನ ವ್ಯವಸ್ಥಾಪಕ ಪಿ.ವೈ.ಬ್ಯಾಕೋಡ ಇತರರಿದ್ದರು.

ಬ್ಯಾಂಕಿನ ಮಾರಾಟಾಧಿಕಾರಿ ರಾಘವೇಂದ್ರ ಚಿಕ್ಕೊಂಡ ಕಾರ್ಯಕ್ರಮ ನಿರ್ವಹಿಸಿದರು. ಬ್ಯಾಂಕಿನ ನಿರ್ದೇಶಕ ಶಂಕರಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಎಂ. ಜಿ. ಆದಿಗೊಂಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net