ಲೋಕೇಶ್, ಲಕ್ಕಮ್ಮ ಅವಿರೋಧ ಆಯ್ಕೆ

13arsph1ep
ಕಲ್ಗುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಲೋಕೇಶ್, ಲಕ್ಕಮ್ಮ ಅವರನ್ನು ಅಭಿನಂದಿಸಲಾಯಿತು. ಕೆ.ಎಸ್.ಚಂದ್ರಶೇಖರ್, ಮುಖಂಡ ನಂದೀಶ್ ಸೇರಿದಂತೆ ಸದಸ್ಯರು ಹಾಜರಿದ್ದರು.
Published on

ಅರಸೀಕೆರೆ : ತಾಲೂಕಿನ ಕಲ್ಗುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಲೋಕೇಶ್ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕಲ್ಲುಸಾದರಹಳ್ಳಿಯ ಲಕ್ಕಮ್ಮ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ನಡೆದ ಚುನಾವಣೆಯಲ್ಲಿ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹೇಮಚಂದ್ರ ಆಯ್ಕೆ ಪ್ರಕಟಿಸಿದರು. ಹೊರಗೆ ಜಮಾಯಿಸಿದ್ದ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಮುಖಂಡ ನಂದೀಶ್, ಕ್ಷೇತ್ರ ಮೇಲ್ವಿಚಾರಕ ಓಂಕಾರಮೂರ್ತಿ, ನಿರ್ದೇಶಕರಾದ ಜಯಣ್ಣ, ಲೋಕೇಶ್, ಪರಮೇಶ್, ರಾಜಣ್ಣ, ಕರಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net