ಲೋಕಾಯುಕ್ತಕ್ಕೆ ಬರುವ ಮುನ್ನ ಕೂಪ ಮಂಡೂಕನಾಗಿದ್ದೆ..

IMG_4668
Published on

ಶಿವಮೊಗ್ಗ: ವೃತ್ತಿ ಜೀವನದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದೇನೆ. ಆದರೆ ಲೋಕಾಯುಕ್ತಕ್ಕೆ ಬರುವ ಮೊದಲು ನಾನು ಕೂಪ ಮಂಡೂಕನಂತಿದ್ದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ನಗರದ ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಭಾನುವಾರ ಯುವಧ್ವನಿ ಸಾಮಾಜಿಕ ಸೇವಾ ಸಂಸ್ಥೆಯ 8ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿದ್ದ ಯಾವೊಂದು ಅನ್ಯಾಯಗಳು ತಿಳಿದಿರಲಿಲ್ಲ. ನಾನು ಸುಖವಾಗಿದ್ದು ಜನರೂ ಸುಖವಾಗಿದ್ದಾರೆಂದು ನಂಬಿದ್ದೆ ಎಂದರು.

ಸಂವಿಧಾನದಲ್ಲಿ ಜನರ ಸೇವೆಗಾಗಿ ನಾವೇ ಆಯ್ಕೆ ಮಾಡಿದ್ದ ಸರ್ಕಾರಗಳಿಂದಲೇ ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂಬುದನ್ನು ತಿಳಿದು ಆಘಾತಗೊಂಡಿದ್ದೆ ಎಂದರು. ಇದುವರೆಗೆ 1,600ಕ್ಕೂ ಅಧಿಕ ಶಾಲಾ-ಕಾಲೇಜುಗಳಿಗೆ ತೆರಳಿ ಅನುಭವಗಳನ್ನು ಹಂಚಿಕೊಂಡಿದ್ದೇನೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ. ಯಾವುದೇ ಸಂಸ್ಥೆಯ ದೊಡ್ಡಸ್ಥಿಕೆ ನೋಡಿ ಸಭೆ-ಸಮಾರಂಭಕ್ಕೆ ಬರುವುದಿಲ್ಲ. ಸಮಯ ಇದ್ದರೆ ಒಪ್ಪಿಕೊಳ್ಳುತ್ತೇನೆ. ಒಂದು ನಯಾ ಪೈಸೆ ಪಡೆಯದೇ ಸ್ವಂತ ಖರ್ಚಿನಲ್ಲೇ ಬರುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net