

ರಾಣೆಬೆನ್ನೂರ: ಪಿಡಿಒ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಂಗನವಾಡಿ ಕೇಂದ್ರಗಳ ಬಾಗಿಲು 10.30 ಗಂಟೆಯಾದರೂ ತೆರೆದಿರಲ್ಲ. ಆದರೆ, ಒಳಗಿರುವ ಆಹಾರ ಪದಾರ್ಥ ಕಳ್ಳತನ ಆಗುತ್ತೆ. ಗೋಮಾಳ ಜಾಗದಲ್ಲಿ ಮನೆ ನಿಮಿರ್ಸಿದವರಿಗೆ ಹಕ್ಕುಪತ್ರ ನೀಡಬಾರದು. ತಹಸೀಲ್ದಾರ್ ಕಟ್ಟಡ ಸುತ್ತಲಿನ ದಸ್ತು ಬರಹಗಾರರು ವಾಣಿಜ್ಯ ಮಳಿಗೆ ಬಳಸುತ್ತಿದ್ದು, ಅವರಿಗೆ ಅವಕಾಶ ನೀಡಬಾರದು...!
ಇವು ನಗರ ಸೇರಿ ತಾಲೂಕಿನ ಜನತೆ ಲೋಕಾಯುಕ್ತ ಅಧಿಕಾರಿಗಳ ಎದುರು ತೋಡಿಕೊಂಡ ಅಳಲು ಹಾಗೂ ಆರೋಪ.
ಬುಧವಾರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ನೇತೃತ್ವದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಅಧಿಕಾರಿಗಳಿಗೆ 18 ಲಿಖಿತ ಹಾಗೂ 8 ಮೌಖಿಕ ಅಜಿರ್ ಸಲ್ಲಿಕೆಯಾದವು.
ಪ್ರಕರಣ ದಾಖಲಿಸಲು ಸೂಚನೆ...
ತಾಲೂಕಿನ ಉದಗಟ್ಟಿ ಗ್ರಾಮದ ನಾಗರಾಜ ತಳವಾರ ಎಂಬುವರು, ಜೂ. 21ರಂದು ನಮ್ಮ ಗ್ರಾಮದ ಅಂಗನವಾಡಿ ಕೇಂದ್ರ ತೆರೆದಿರುವುದಿಲ್ಲ. ಆದರೆ, ಅಂದು ಅಂಗನವಾಡಿ ಕೇಂದ್ರದಲ್ಲಿದ್ದ ಆಹಾರ ಪದಾರ್ಥ ಕಳ್ಳತನವಾಗಿದೆ. ಇದು ಹೇಗೆ ಸಾಧ್ಯ ಎಂದು ಡಿವೈಎಸ್ಪಿ ಮಧುಸೂದನ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದ ಬಗ್ಗೆ ದೂರು ಏಕೆ ನೀಡಿಲ್ಲ ಎಂದು ಸಿಪಿಡಿಒ ಪಾರ್ವತಿ ಹುಂಡೇಕಾರ ಅವರನ್ನು ವಿಚಾರಿಸಿದಾಗ, ಅಂಗನವಾಡಿ ಶಿಕ್ಷಕಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲ್ಲ. ಅವರನ್ನು ಅಮಾನತುಗೊಳಿಸಲು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಹರನಗಿರಿ ಗ್ರಾಮದ ಸುರೇಂದ್ರ ಜ್ಯೋತಿ ಎಂಬುವರು ಮಾತನಾಡಿ, ಬೇಲೂರು ಗ್ರಾಮದ ಗೋಮಾಳ ಜಮೀನಿನಲ್ಲಿ ಅನಧಿಕೃತವಾಗಿ ನಿಮಿರ್ಸಿದ ಕಟ್ಟಡಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದು, ಇದನ್ನು ತಡೆಗಟ್ಟಬೇಕು ಎಂದು ಅಜಿರ್ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಆರ್.ಎಚ್. ಭಾಗವಾನ್, ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದ್ದರೆ ಅಂತವರಿಗೆ ಹಕ್ಕು ಪತ್ರ ನೀಡಿ ಕಂದಾಯ ಗ್ರಾಮ ರಚಿಸಬೇಕು ಎಂದು ಸರ್ಕಾರದಿಂದ ಸೂಚನೆಯಿದೆ. ಅದರಂತೆ ಪ್ರಾಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದಸ್ತಗಿರಿ ಬದಲು ವಾಣಿಜ್ಯ ಬಳಕೆಗೆ...
ಡಾ. ಅಂಬೇಡ್ಕೆರ್ ಸೇವಾ ಸಂಸ್ಥೆ ವತಿಯಿಂದ ಅಜಿರ್ ಸಲ್ಲಿಸಿ, ರಾಣೆಬೆನ್ನೂರ ತಹಸೀಲ್ದಾರ್ ಕಚೇರಿ ಪಕ್ಕದ ದಸ್ತು ಬರಹಗಾರರಿಗೆ ನೀಡಿದ ಜಾಗವನ್ನು ಟೆಂಡರ್ ಮೂಲಕ ಬೇರೆಯವರಿಗೆ ನೀಡಬೇಕು. ಈಗಿರುವ ದಸ್ತು ಬರಹಗಾರರ ಅವಧಿ ಮುಗಿದಿದೆ. ಅವರು ಅನಧಿಕೃತ ವಾಣಿಜ್ಯ ಉದ್ದೇಶಕ್ಕೆ ಮಳಿಗೆ ಬಳಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಪ್ರತಿಕ್ರಿಯಿಸಿ, ಮಳಿಗೆದಾರರ ಬಗ್ಗೆ ಪರಿಶೀಲಿಸಿ ಗುತ್ತಿಗೆ ಅವಧಿ ನವೀಕರಣ ಬಗ್ಗೆ ಮೇಲಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಲಾಗಿತ್ತು. ಉಪ ವಿಭಾಗಾಧಿಕಾರಿಗಳು ಸ್ಥಳ ಪರಿಶೀಲಿಸಿ ಖಚಿತ ವರದಿ ಸಲ್ಲಿಸಿದ್ದಾರೆ ಎಂದರು.
ಸುರೇಂದ್ರ ಜ್ಯೋತಿ ಮಾತನಾಡಿ, ಹರನಗಿರಿ ಗ್ರಾಪಂ ಪಿಡಿಒ ಸರಿಯಾಗಿ ಕರ್ತವ್ಯ ಮಾಡುತ್ತಿಲ್ಲ. ಪದೇ ಪದೇ ಪಿಡಿಒ ನಿಯೋಜನೆ ಮಾಡಲಾಗುತ್ತಿದೆ. ಕಾರಣ ಹರನಗಿರಿ ಗ್ರಾಪಂಗೆ ಖಾಯಂ ಪಿಡಿಒ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಡಿವೈಎಸ್ಪಿ ಈ ಬಗ್ಗೆ ಕ್ರಮ ಕೈಗೊಳ್ಳಲು ತಾಪಂ ಇಒ ಅವರಿಗೆ ಸೂಚಿಸಿದ್ದೇನೆ ಎಂದರು.
ಲೋಕಾಯುಕ್ತ ಸಿಪಿಐಗಳಾದ ಮಂಜುನಾಥ ಪಂಡಿತ, ಬಸವರಾಜ ಹಳಬಣ್ಣನವರ, ದಾದಾವಲಿ ಕೆ.ಎಚ್., ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.