

ನವದೆಹಲಿ: ಇಂದು ಮಂಡ್ಯ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್ ಅವರ ಜನ್ಮದಿನ. ಅನೇಕ ರಾಜಕೀಯ ಗಣ್ಯರೂ ಶುಭ ಹಾರೈಸಿದ್ದಾರೆ.
ಈ ಮಧ್ಯೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಸುಮಲತಾ ಅಂಬರೀಷ್ ಅವರಿಗೆ ಕನ್ನಡದಲ್ಲೇ ಜನ್ಮದಿನದ ಶುಭ ಕೋರಿದ್ದಾರೆ. ಇದನ್ನೂ ಓದಿ: ‘ವಿಷಕನ್ಯೆ ಇವಳು…ಭೂಗತಲೋಕದ ಸುಪಾರಿ ಕಿಲ್ಲರ್…’: ಸಚಿವರ ಆರೋಪ
ಕರ್ನಾಟಕದ ಮಂಡ್ಯ ಲೋಕಸಭಾ ಸಂಸದರಾದ ಸುಮಲತಾ ಅಂಬರೀಷ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ಒಳ್ಳೆಯ ಆರೋಗ್ಯ ಮತ್ತು ಸುದೀರ್ಘ ಬದುಕನ್ನು ನಿಮಗೆ ನೀಡಲಿ. ಶ್ರದ್ಧೆಯಿಂದ ಜನರ ಸೇವೆ ಮಾಡಲು ಹಾಗೂ ದೇಶದ ಪ್ರಗತಿಗೆ ಇನ್ನೂ ಹೆಚ್ಚು ಶ್ರಮಿಸಲು ಶಕ್ತಿ ನೀಡಲಿ. ನಿಮ್ಮೆಲ್ಲ ಪ್ರಯತ್ನಗಳೂ ಸಫಲವಾಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.