ಅಧ್ಯಕ್ಷರಾಗಿ ಲೋಕಮ್ಮ, ಉಪಾಧ್ಯಕ್ಷರಾಗಿ ವೈ.ಪ್ರೇಮಕ್ಕ

LOKAMMA SURESHA jajur
Published on

ಪರಶುರಾಮಪುರ: ಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೋಕಮ್ಮ ಸುರೇಶ, ಉಪಾಧ್ಯಕ್ಷರಾಗಿ ವೈ.ಪ್ರೇಮಕ್ಕ ಹನುಮಂತಯ್ಯ ಗುರುವಾರ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲೋಕಮ್ಮ 9, ಸುಧಮ್ಮ 8, ಎಸ್ಸಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಲಕ್ಷ್ಮೀ 7, ವೈ.ಪ್ರೇಮಕ್ಕ 11 ಮತ ಪಡೆದರು.

ಚುನಾವಣಾಧಿಕಾರಿ ತೋಟಗಾರಿಕಾ ಎಡಿಎ ವಿರೂಪಾಕ್ಷಪ್ಪ, ಸಿದ್ದೇಶ್ ಕಾರ್ಯನಿರ್ವಹಿಸಿದರು. ಗ್ರಾಪಂ ಪಿಡಿಒ ಓಬಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net