

* ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಭಷ್ಟ್ಟಾಚಾರ ನಡೆಯುತ್ತಿದೆ ಎಂಬುದು ಲೋಕಾಯುಕ್ತರು ದಿಢೀರ್ ದಾಳಿ ನಡೆಸಿದಾಗ ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಜಿಲ್ಲೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು, ಇದುವರೆಗೂ ಸುಮಾರು ಬಾರಿ ಜಿಲ್ಲೆಗೆ ದಿಢೀರ್ ಭೇಟಿ ನೀಡಿ ಸರ್ಕಾರಿ ಅಧಿಕಾರಿ, ಸಿಬ್ಬಂದಿಯ ಜನ್ಮ ಜಾಲಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಲು ಮುಂದಾಗಿದ್ದಾರೆ.
ಈಗಾಗಲೇ ಕೋಲಾರ, ಕೆಜಿಎ್, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಮಾಲೂರು ತಾಲೂಕುಗಳಿಗೆ ಭೇಟಿ ನೀಡಿ, ಪರಿಶೀಲಿಸಿದಾಗ ಸಾಕಷ್ಟು ಲೋಪಗಳು ಕಂಡು ಬಂದಿವೆ. ನಗರಸಭೆ, ಅಬಕಾರಿ ಇಲಾಖೆ, ಸರ್ಕಾರಿ ಆಸ್ಪತ್ರೆ, ಗಣಿ ಮತ್ತು ವಿಜ್ಞಾನ ಇಲಾಖೆ, ಸರ್ಕಾರಿ ಹಾಸ್ಟೆಲ್ಗಳಿಗೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಡಿಐಸಿ), ತಾಲೂಕು ಕಚೇರಿ, ಎಪಿಎಂಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸರ್ವೇ ಇಲಾಖೆ ಸೇರಿ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಭ್ರಷ್ಟರ ಭೇಟೆಯಾಡುತ್ತಿದ್ದಾರೆ.
ಭೇಟಿ ಸಂದರ್ಭದಲ್ಲಿ ಇಲಾಖೆಗಳಲ್ಲಿ ಸಕಾಲಕ್ಕೆ ಸಾರ್ವಜನಿಕರ ಕೆಲಸಗಳು ಆಗದೆ ಇರುವುದು, ಅಧಿಕಾರಿ, ಸಿಬ್ಬಂದಿಯ ಕಾರ್ಯವೈಖರಿ, ಸಾರ್ವಜನಿಕರಿಂದ ದೂರುಗಳ ಸಲ್ಲಿಕೆ ಆಗಿವೆ. ಚಲನವಲನ ಪುಸ್ತಕದಲ್ಲಿ ಸಹಿ ಮಾಡದೆ ಇರುವುದು, ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದೆ ಇರುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಅವಧಿ ಮೀರಿರುವ ಔಷಧ ವಾರ್ಡ್ಗಳಲ್ಲಿ ಪತ್ತೆಯಾಗಿರುವುದು, ಆದಾಯ ಮೀರಿ ಬ್ಯಾಂಕ್ ವಹಿವಾಟು ನಡೆಸಿರುವುದು ಹೀಗೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ಅಧಿಕಾರಿಗಳ, ಸಿಬ್ಬಂದಿಯ ವರ್ತನೆಗಳನ್ನು ಕಂಡು ಲೋಕಾಯುಕ್ತರೆ ಶಾಕ್ ಆಗಿದ್ದಾರೆ. ಸರ್ಕಾರದಿಂದ ಬರುವ ಸಂಬಂಳಕ್ಕಿಂತ ಹೆಚ್ಚು ಬ್ಯಾಂಕ್ ವಹಿವಾಟು ಮಾಡಿದ್ದಾರೆ. ಭೇಟಿ ಸಮಯದಲ್ಲಿ ಅಧಿಕಾರಿಗಳ, ಸಿಬ್ಬಂದಿ ೋನ್ ಪೇ, ಗೂಗಲ್ ಪೇ, ಪೇಟಿಯಮ್ (ಯುಪಿಐ ಆ್ಯಪ್) ಪರಿಶೀಲಿಸಿದಾಗ ಲಾಂತರ ರೂ. ಗಟ್ಟಲೇ ವಹಿವಾಟು ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ದಾಳಿ ವೇಳೆ ಕಂಡು ಬಂದಿರುವ ಲೋಪಗಳ ಹಿನ್ನೆಲೆಯಲ್ಲಿ ಈಗಾಲೇ ಕೆಜಿಎ್ 5, ಕೋಲಾರದಲ್ಲಿ 13 ದೂರುಗಳು ದಾಖಲಾಗಿದ್ದು, ನಗರಸಭೆ ಪೌರಾಯುಕ್ತರು, ಕಾರ್ಮಿಕಾಧಿಕಾರಿ, ಗಣಿ, ಡಿಐಸಿ, ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೀಗೆ ಸುಮಾರು ಮಂದಿ ಎದುರುದಾರರಾಗಿದ್ದಾರೆ.
* ವಹಿವಾಟು ನೋಡಿ ಲೋಕಾ ಶಾಕ್
ಕೋಲಾರ, ಮುಳಬಾಗಿಲು, ಕೆಜಿಎ್ ನಗರಸಭೆ, ತಾಲೂಕು ಕಚೇರಿ ಸಿಬ್ಬಂದಿ, ಮಾಲೂರು, ಕೋಲಾರ ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳ ಮೊಬೈಲ್ನಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಯುಪಿಐ ಪರಿಶೀಲಿಸಿದಾಗ ವಹಿವಾಟು ನೋಡಿ ಶಾಕ್ ಆಗಿದ್ದಾರೆ. ಬೇರೊಬ್ಬರಿಗೆ ಹಣ ಕಳುಹಿಸಿರುವುದಕ್ಕಿಂತ, ಜನರಿಂದ ಸಾವಿರಾ ರೂ. ಹಾಕಿಸಿಕೊಂಡಿರುವುದೇ ಹೆಚ್ಚಾಗಿದೆ. ಬರುವ ಸಂಬಂಳಕ್ಕಿಂತ ಹೆಚ್ಚುವರಿ ವಹಿವಾಟು ನಡೆದಿರುವುದರಿಂದ ಜನರಿಂದ ಹಣ ವಸೂಲಿ ಮಾಡಿರುವುದು ಎಂದು ಶಂಕಿಸಲಾಗಿದ್ದು, ಬ್ಯಾಂಕ್ ಮಾಹಿತಿ ನೀಡುವಂತೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
* ಬೇರೂರಿರುವವರೇ ಭ್ರಷ್ಟರು...?
ತಾಲೂಕು ಕಚೇರಿ, ನಗರಸಭೆ, ಎಸ್ಎನ್ಆರ್ ಆಸ್ಪತ್ರೆ, ಸರ್ವೇ ಇಲಾಖೆ, ಡಿಐಸಿ ಸೇರಿೆ ವಿವಿಧ ಇಲಾಖೆಗಳಲ್ಲಿ ಸುಮಾರು 10 ವರ್ಷಕ್ಕೂ ಮೀರಿ ಸಿಬ್ಬಂದಿ ಬೇರು ಬಿಟ್ಟುಕೊಂಡಿದ್ದು, ಇವರನ್ನು ಬೇರೆ ಕಡೆಗೆ ಬದಲಾವಣೆ ಮಾಡದೆ ಇರುವುದು ಇಲಾಖೆಯ ವ್ಯವಸ್ಥೆ ಕಡೆಲು ಪ್ರಮುಖ ಕಾರಣವಾಗಿದೆ. ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಬದಲಾಗುತ್ತಾರೆ ಹೊರತು, ಬಿ, ಸಿ ವೃಂದದ ಅಧಿಕಾರಿ, ಸಿಬ್ಬಂದಿ ಬದಲಾವಣೆ ಆಗದೆ ಇರುವುದು ಭ್ರಷ್ಟಾಚಾರಕ್ಕೆ ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ.
* ಲೋಪ ಎಸಗಿದವರ ವಿರುದ್ಧ ಇಲ್ಲ ಕ್ರಮ
ಕೋಲಾರ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆ, ಕೆಜಿಎ್ ಸಾರ್ವಜನಿಕರ ಆಸ್ಪತ್ರೆಗಳಲ್ಲಿ ಅವಧಿ ಮೀರಿರುವ ಔಷಧ, ಇಂಜೆಕ್ಷನ್ ಪತ್ತೆಯಾಗಿದ್ದು, ಇದು ಲೋಕಾಯುಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಸಂಬಳ ಪಡೆದುಕೊಂಡು, ಜನರಿಂದಲೂ ಹಣ ಪಿಕುವುದಲ್ಲದೆ ಅವಧಿ ಮೀರಿರುವ ಔಷಧ ನೀಡುತೀರಾ ಎಂದು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂಥ ಅಧಿಕಾರಿ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮವಾಗಿಲ್ಲ, ಕೇವಲ ನೊಟೀಸ್ಗೆ ಸಿಮೀತವಾಗಿದೆ.
ಕೋಟ್...
ಕೋಲಾರ ನನ್ನ ಪುಣ್ಯ ಭೂಮಿ, ಮೊದಲು ನನ್ನ ಮನೆಯನ್ನು ಭ್ರಷ್ಟ ಮುಕ್ತವಾಗಿಸಿಕೊಳ್ಳಬೇಕಾಗಿದ್ದು, ಈಗಾಗಲೇ ಸಾಕಷ್ಟು ಕಚೇರಿಗಳಿಗೆ ಭೇಟಿ ನೀಡಲಾಗಿದೆ. ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿದ್ದೇವೆ. ಇನ್ನು ಮುಂದೆಯೂ ಪಂಚಾಯಿತಿಗಳಿಗೆ ನುಗ್ಗಿ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಲಾಗುವುದು.
> ಬಿ.ವೀರಪ್ಪ, ಉಪಲೋಕಾಯುಕ್ತರು, ಬೆಂಗಳೂರು.
ಕೋಟ್...
ವ್ಯವಸ್ಥೆಯಲ್ಲಿ ಕಾರ್ಯಾಂಗ ಹಳಿ ತಪ್ಪಿದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದಿಲ್ಲ. ಆಡಳಿತವನ್ನು ಸರಿಪಡಿಸಿಕೊಳ್ಳುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಂಪೂರ್ಣ ವಿಲವಾಗಿದ್ದು, ಲೋಕಾಯುಕ್ತರು ದಾಳಿ ಮಾಡಿ ಅಧಿಕಾರಿ, ಸಿಬ್ಬಂದಿಗೆ ಬಿಸಿ ಮುಟ್ಟಿಸುತ್ತಿರುವುದು ಶ್ಲಾನೀಯ.
> ಕೆ.ನಾರಾಯಣಗೌಡ, ರೈತ ಮುಖಂಡ, ಕೋಲಾರ