ಲೋಕಸಭಾ ಚುನಾವಣೆ 2024: ಎರಡನೇ ಹಂತದ ಮತದಾನ ಅದ್ಭುತವಾಗಿದೆ ಎಂದ ಪ್ರಧಾನಿ ಮೋದಿ!

mo
Published on

ಬೆಂಗಳೂರು: ದೇಶದಲ್ಲಿ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಮತದಾನ ಪಕ್ರಿಯೆ ಸಂಜೆ 6 ಗಂಟೆಗೆ ಸರಿಯಾಗಿ ಅಂತ್ಯಗೊಂಡಿದೆ.

ನಿಗದಿತ ಸಮಯವಾಗುತ್ತಿದ್ದಂತೆ ಅಧಿಕಾರಿಗಳು ಮತಗಟ್ಟೆಯ ಪ್ರಮುಖ ದ್ವಾರಗಳನ್ನು ಮುಚ್ಚಿದರು. ರಾಜ್ಯಾದ್ಯಂತ ಸಣ್ಣ-ಪುಟ್ಟ ಗಲಾಟೆಯೊಂದಿಗೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಅಂತ್ಯವಾಗಿದೆ. ಇನ್ನು 14 ಕ್ಷೇತ್ರಗಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡಿದರೆ ಮಂಡ್ಯದಲ್ಲಿ ಗರಿಷ್ಠ ಮತದಾನವಾಗಿದೆ.

ಎರಡನೇ ಹಂತದ ಮತದಾನ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ಎರಡನೇ ಹಂತದ ಮತದಾನ ಅದ್ಭುತವಾಗಿದೆ! ಎಂದು ಕನ್ನಡದ ತಮ್ಮ ಅಧಿಕೃತ ಎಕ್ಸ್​ ಖಾತೆಯ ಮೂಲಕ ಟ್ಟೀಟ್ ಮಾಡಿದ್ದಾರೆ.

ಟ್ಟೀಟ್​ನಲ್ಲಿ ಏನು ಬರೆದುಕೊಂಡಿದ್ದಾರೆ?: ಎರಡನೇ ಹಂತದ ಮತದಾನ ಅದ್ಭುತವಾಗಿದೆ!. ಇಂದು ಮತ ಚಲಾಯಿಸಿದ ಭಾರತದಾದ್ಯಂತದ ಜನರಿಗೆ ಕೃತಜ್ಞತೆಗಳು. ಎನ್‌ಡಿಎಗೆ ಭಾರೀ ಜನಬೆಂಬಲ ವಿರೋಧಪಕ್ಷಗಳನ್ನು ಇನ್ನಷ್ಟು ಹತಾಶೆಗೊಳಿಸಲಿದೆ. ಮತದಾರರು ಎನ್‌ಡಿಎಯ ಉತ್ತಮ ಆಡಳಿತವನ್ನು ಬಯಸುತ್ತಾರೆ. ಯುವಕರು ಮತ್ತು ಮಹಿಳಾ ಮತದಾರರು ಪ್ರಬಲ ಎನ್‌ಡಿಎ ಬೆಂಬಲಕ್ಕೆ ಶಕ್ತಿ ತುಂಬುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net