ಲೋಕಸಭೆ ಚುನಾವಣೆ ಮಂಗಳವಾರ 49 ನಾಮಪತ್ರ ಸಲ್ಲಿಕೆ

k54g681_eci_625x300_27_October_23.jpg
Published on

ಬೆಂಗಳೂರು: ರಾಜ್ಯದ 2 ನೇ ಹಂತದ ಲೋಕಸಭಾ ಚುನಾವಣೆಗೆ ಮಂಗಳವಾರ 40 ಅಭ್ಯರ್ಥಿಗಳು 49 ನಾಮಪತ್ರ ಸಲ್ಲಿಸಿದ್ದಾರೆ.

ಮಂಗಳವಾರ 39 ಪುರುಷ, 1 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 40 ಅಭ್ಯರ್ಥಿಗಳು 49 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಆರಂಭದಿಂದ ಈವರೆಗೆ ಒಟ್ಟು 112 ಪುರುಷ, 11 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 123 ಅಭ್ಯರ್ಥಿಗಳು 175 ನಾಮಪತ್ರ ಸಲ್ಲಿಸಿದ್ದಾರೆ.

ಈವರೆಗೆ ಒಟ್ಟು ಚಿಕ್ಕೋಡಿ 7, ಬೆಳಗಾವಿ 7, ಬಾಗಲಕೋಟೆ 7, ವಿಜಯಪುರ 8, ಕಲಬುರಗಿ 7, ರಾಯಚೂರು 5, ಬೀದರ್ 12, ಕೊಪ್ಪಳ 10, ಬಳ್ಳಾರಿ 5, ಹಾವೇರಿ 9, ಧಾರವಾಡ 10, ಉತ್ತರ ಕನ್ನಡ 10, ದಾವಣಗೆರೆ 15, ಶಿವಮೊಗ್ಗ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net