

ರಾಣೆಬೆನ್ನೂರ: ಇಲ್ಲಿಯ ತಾಲೂಕು ನ್ಯಾಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.
ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಲ್ಲಿ ಗುರುತಿಸಲಾದ ಒಟ್ಟು 2273 ಪ್ರಕರಣಗಳಲ್ಲಿ 1689 ಪ್ರಕರಣಗಳು ಇತ್ಯರ್ಥಗೊಂಡಿ-ವೆ. ಅವುಗಳಲ್ಲಿ ಮೋಟರ್ ವಾಹನ ಕಾಯ್ದೆಗೆ ಸಂಬಂಧಿಸಿದ 192 ಪ್ರಕರಣಗಳು ಮತ್ತು 2 ಕೌಟುಂಬಿಕ ಕಲಹ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಮೋಟರು ವಾಹನ ಕಾಯ್ದೆ, ಕೌಟಂಬಿಕ ಕಲಹ, ಚೆಕ್ ಬೌನ್ಸ್, ಆಸ್ತಿ ವಿವಾದ ಸೇರಿ ಮತ್ತಿತರ ಪ್ರಕರಣಗಳಲ್ಲಿಯ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು ಎಂದು ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹೇಮಲತಾ ಹುಲ್ಲೂರ ತಿಳಿಸಿದರು.
ಜಿಲ್ಲಾ ನ್ಯಾಯಾಧೀಶ ಮಧುಸೂದನ್ ರಾವ್ ಮತ್ತು ಹಿರಿಯ ವಕೀಲರು ಹಾಗೂ ಕ್ಷಕಿದಾರರು ಪಾಲ್ಗೊಂಡಿದ್ದರು.