VIDEO: ಕೋಲಾರದಲ್ಲಿ ಎಕ್ಕದ ಗಿಡದ ತುಂಬೆಲ್ಲ ಮಿಡತೆಗಳ ದಂಡು; ರೈತರಲ್ಲಿ ಆತಂಕ

Midate 28 May 20
Published on

ಕೋಲಾರ: ಉತ್ತರ ಭಾರತದ ಹಲವು ರಾಜ್ಯಗಳು ಲಕ್ಷೋಪಲಕ್ಷ ಮಿಡತೆಗಳ ಹಾವಳಿಗೆ ತತ್ತರಿಸಿವೆ. ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶಗಳಲ್ಲಿ ಅಪಾರ ಬೆಳೆ ನಾಶ ಮಾಡಿರುವ ಮಿಡತೆಗಳ ಹಿಂಡು ಮಹಾರಾಷ್ಟ್ರ ಪ್ರವೇಶಿಸಿದ್ದು, ಕರ್ನಾಟಕ್ಕೆ ಕಾಲಿಡುವ ಭೀತಿ ಎದುರಾಗಿದೆ.

ಈ ಮಧ್ಯೆ ಕೋಲಾರದಲ್ಲಿ ಮಿಡತೆಗಳು ಕಂಡುಬಂದಿದ್ದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೋಲಾರ ತಾಲೂಕಿನ ದಿಂಬ ಗೇಟ್​​ ಬಳಿ ಎಕ್ಕದ ಗಿಡದ ಮೇಲೆ ಮಿಡತೆಗಳು ಕಂಡುಬಂದು ರೈತರಲ್ಲಿ ಭಯ ಹೆಚ್ಚಿದ ಬೆನ್ನಲ್ಲೇ ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ.

ಈ ಮಿಡತೆಗಳು ಉತ್ತರ ಭಾರತದ ರಾಜ್ಯಗಳಲ್ಲಿ ದಾಳಿ ಮಾಡಿದವು ಅಲ್ಲ. ಇವು ಸಾಮಾನ್ಯವಾಗಿ ಕಂಡುಬರುವ ಮಿಡತೆಗಳು. ಆದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದರಿಂದ ಆತಂಕ ಮೂಡಿದೆ. ರೈತರು ಭಯ ಪಡುವ ಅಗತ್ಯವಿಲ್ಲ. ಈ ತರಹದ ಮಿಡತೆಗಳು ಬೆಳೆ ಹಾನಿ ಮಾಡೋದಿಲ್ಲ ಎಂದು ಕೋಲಾರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ತಜ್ಞರು ಮತ್ತೊಮ್ಮೆ ಪರಿಶೀಲನೆ ನಡೆಸಲಿದ್ದಾರೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net