ಪ್ರಚಾರಕ್ಕಾಗಿ 20 ಸಾವಿರ ರೂಪಾಯಿ ತರಕಾರಿ ಖರೀದಿಸಿದ ಮಾಜಿ ಶಾಸಕ ಬಾಲಕೃಷ್ಣ: ಎಚ್​ಡಿಕೆ ವಾಗ್ದಾಳಿ

kumaraswamy
Published on

ರಾಮನಗರ : ಮಾಜಿ ಶಾಸಕ ಬಾಲಕೃಷ್ಣ ಅವರು ಲಾಕ್​ಡೌನ್​ ಸಮಯದಲ್ಲಿ ಕೇವಲ 20 ಸಾವಿರ ರೂಪಾಯಿ ನೀಡಿ ತರಕಾರಿ ಖರೀದಿಸಿ ಅದನ್ನೇ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕರೊನಾ ವೈರಸ್​ ಹಾವಳಿ ಸಂದರ್ಭದಲ್ಲಿ ಮಣ್ಣಿನ ಮಕ್ಕಳು ಎಲ್ಲಿದ್ದಾರೆ ಎಂದು ಶಾಸಕ ಬಾಲಕೃಷ್ಣ ಅವರು ಎಚ್​.ಡಿ.ಕುಮಾರಸ್ವಾಮಿ ಅವರ ವಿರುದ್ಧ ಟೀಕೆ ಮಾಡಿದ್ದರು. ಇದಕ್ಕೆ ಮಾಜಿ ಸಿಎಂ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಣ್ಣಿನ ಮಕ್ಕಳು ಎಂದು ಬಿರುದನ್ನು ನಾನು ಹಾಕಿಕೊಂಡಿಲ್ಲ. ರಾಜ್ಯದ ರೈತರು ನಮಗೆ ಪ್ರೀತಿಯಿಂದ ನೀಡಿರುವ ಗೌರವ. ಹೀಗಾಗಿ ಬಾಲಕೃಷ್ಣ ಅವರಿಂದ ನಾನು ಏನು ಕಲಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

5 ಕೋಟಿ ರೂಪಾಯಿ ವೆಚ್ಚದ ದಿನಸಿ: ಚನ್ನಪಟ್ಟಣ ಹಾಗೂ ರಾಮನಗರ ತಾಲೂಕಿಗೆ ಲಾಕ್​ಡೌನ್​ ಅವಧಿಯಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ನಿತ್ಯ ಊಟ ಹಾಕಲು 5 ಕೋಟಿ ರೂಪಾಯಿ ವೆಚ್ಚದ ದಿನಸಿ ಖರೀದಿಸಿದ್ದೇನೆ. ಎರಡು ತಾಲೂಕಿನಲ್ಲಿ ಪ್ರತಿನಿತ್ಯ ಜನರಿಗೆ ಊಟ ಹಾಕಲಾಗುತ್ತಿದೆ. ಮಣ್ಣಿನ ಮಕ್ಕಳು ಯಾವುದೇ ಕಾರಣಕ್ಕೂ ಮಲಗುವುದಿಲ್ಲ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net