ಎಲ್ಲೆಲ್ಲೂ ಲಾಕ್​ಡೌನ್​..ತುತ್ತು ಅನ್ನಕ್ಕಾಗಿ ಕಣ್ಣೀರಿಡುತ್ತಿದ್ದಾರೆ ಸುಡುಗಾಡು ಸಿದ್ದರು; ಹಸಿವಿನಿಂದ ಕಂಗಾಲಾದ ಮಕ್ಕಳು

Sudugadu sidda 13
Published on

ಚಿತ್ರದುರ್ಗ: ದೇಶಾದ್ಯಂತ ಲಾಕ್​ಡೌನ್​ ಆಗಿರುವ ಹಿನ್ನೆಲೆಯಲ್ಲಿ ಅದೆಷ್ಟೋ ಜನರು ಹೊಟ್ಟೆತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ.

ದಿನಗೂಲಿ ಕೆಲಸಗಾರರು, ವಲಸೆ ಕಾರ್ಮಿಕರಿಗೆಲ್ಲ ಆಶ್ರಯತಾಣಗಳನ್ನು ನಿರ್ಮಿಸಿ, ಅವರಿಗೆ ಆಹಾರ ನೀಡಲಾಗುತ್ತಿದೆ.

ಹಾಗೇ ಸುಡುಗಾಡು ಸಿದ್ದರೂ ಕೂಡ ತುತ್ತು ಅನ್ನಕ್ಕಾಗಿ ಕಣ್ಣೀರು ಇಡುತ್ತಿದ್ದಾರೆ. ಖಾಲಿ ಪಾತ್ರೆ ಹಿಡಿದು ಅನ್ನಕ್ಕಾಗಿ ಬೇಡುವ ದೃಶ್ಯ ಮನಕಲಕುವಂತಿದೆ.

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಮೈಲೆಹಳ್ಳಿ ಗ್ರಾಮದ ಸುಡುಗಾಡು ಸಿದ್ಧರು ಒಂದು ಹೊತ್ತಿನ ಊಟವೂ ಸಿಗದೆ ಕಷ್ಟಪಡುತ್ತಿದ್ದಾರೆ. ಚಿಕ್ಕಮಕ್ಕಳೂ ಹಸಿವಿನಿಂದ ಕಂಗಾಲಾಗಿದ್ದಾರೆ.

ಲಾಕ್​ಡೌನ್​ ನಿಮಿತ್ತ ಹೊರಗೆಲ್ಲೂ ಹೋಗಲಾಗುತ್ತಿಲ್ಲ. ದುಡಿಮೆ ಇಲ್ಲ. ಆಹಾರ ಹುಡುಕುತ್ತ ಹೊರಟರೆ ಪೊಲೀಸರು ಹಿಡಿಯುತ್ತಾರೆ ಎಂಬುದು ಅವರ ಅಳಲು. ಜಿಲ್ಲಾಡಳಿತ, ತಾಲೂಕು ಆಡಳಿತಗಳೂ ಇವರ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಶೋಚನೀಯ ಸಂಗತಿ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net