4 ರಾಕೆಟ್ ಲಾಂಚರ್ ಪತ್ತೆ, ಕನಕಪುರಕ್ಕೆ ಬಂದ ಮಿಲಿಟರಿ ಪಡೆ

kanakapura Detect 1
Published on

ರಾಮನಗರ: ಕನಕಪುರ ತಾಲೂಕಿನ ‌ಬೊಮ್ಮಸಂದ್ರ ಗ್ರಾಮದ ಬಳಿ ಸೋಮವಾರ ಪತ್ತೆಯಾಗಿದ್ದ ಸ್ಫೋಟಕಗಳು ರಾಕೆಟ್​ ಲಾಂಚರ್​ ಎಂದು ತಿಳಿದು ಬಂದಿದೆ. ಸ್ಫೋಟಕಗಳು ಪತ್ತೆಯಾದಯಲ್ಲಿ ಸ್ಥಳದಲ್ಲೇ ಪೊಲೀಸರು ಬೀಡುಬಿಟ್ಟಿದ್ದು, ಬಾಂಬ್ ನಿಷ್ಕ್ರಿಯ ದಳ ಮತ್ತು ಮಿಲಿಟರಿ ಪಡೆ ಆಗಮಿಸಿವೆ.

ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈನಿಕರು ಬಳಸುತ್ತಿದ್ದ 4 ರಾಕೆಟ್ ಲಾಂಚರ್ ಸೋಮವಾರ ಪತ್ತೆಯಾಗಿದ್ದವು. ಆ ಪೈಕಿ ಸೋಮವಾರವೇ 3 ಸ್ಫೋಟಗೊಂಡಿದ್ದು, 1 ಜೀವಂತವಾಗಿದೆ. 

ಕನಕಪುರದ ‌ಬೊಮ್ಮಸಂದ್ರ ಗ್ರಾಮದಲ್ಲಿ ಸೋಮವಾರ ಪತ್ತೆಯಾಗಿದ್ದ ರಾಕೆಟ್​ ಲಾಂಚರ್.
ಕನಕಪುರದ ‌ಬೊಮ್ಮಸಂದ್ರ ಗ್ರಾಮದಲ್ಲಿ ಸೋಮವಾರ ಪತ್ತೆಯಾಗಿದ್ದ ರಾಕೆಟ್​ ಲಾಂಚರ್.

ಸೈನಿಕರಿಗೆ ತರಬೇತಿಯಲ್ಲಿ ಬಳಸುವ ಈ ಲಾಂಚರ್‌ ಶಸ್ತ್ರಗಳು ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದವು. ಸೋಮವಾರವೇ ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಎಫ್ಎಸ್ಎಲ್ ತಂಡ ಭೇಟಿ ನೀಡಿತ್ತು. ಪರಿಶೀಲನೆ ಮಂಗಳವಾರವೂ ಮುಂದುವರಿಯಿತು. ಸ್ಥಳಕ್ಕೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net