ಕುಡಿಯುವ ನೀರು ಪೋಲಿಗೆ ಸ್ಥಳೀಯರ ದೂರು

Published on

ಮೂಗೂರು: ಕುಡಿಯುವ ನಲ್ಲಿ ನೀರು ದಿನನಿತ್ಯ ಪೋಲಾಗುತ್ತಿರುವ ಜತೆಗೆ ಕೊಳಕು ನೀರು ಮನೆಗಳಿಗೆ ಸರಬರಾಜು ಆಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಮುಖ್ಯ ರಸ್ತೆಯಿಂದ ಕಾಲೇಜು ಬಸ್ ನಿಲ್ದಾಣದ ಮಾರ್ಗದಲ್ಲಿ ಹಾದುಹೋಗುವ ನಲ್ಲಿಗಳಲ್ಲಿ ನೀರು ಸರಬರಾಜು ಆಗುತ್ತಿದೆ.

ವಾಸವಿಲ್ಲದ ಮನೆಯ ಬಳಿ ಇರುವ ನೀರಿನ ತೊಟ್ಟಿಯಲ್ಲಿ ಪಾಚಿ ಕಟ್ಟಿ ತ್ಯಾಜ್ಯದಿಂದ ತುಂಬಿದ ಕೊಳಕು ನೀರು ಬೋರ್‌ವೆಲ್‌ನಿಂದ ನೀರು ಸರಬರಾಜು ನಿಲುಗಡೆಗೊಂಡ ನಂತರ ನಲ್ಲಿಗಳ ಮೂಲಕ ಇತರ ಮನೆಗಳಿಗೆ ಸೇರುತ್ತಿದೆ. ಇಂತಹ ಕೊಳಕು ನೀರು ಸೇವನೆಯಿಂದ ನಿವಾಸಿಗಳು ಆರೋಗ್ಯ ಕೆಡುವ ಮುನ್ನ ಸಂಬಂಧಪಟ್ಟ ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಅದಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಿದೆ

ಫಿಲ್ಟರ್ ನೀರಿನತ್ತ ವಾಲಿದ ಜನತೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೀರು ಸರಬರಾಜು ಮಾಡುವ ನೀರಿನ ತೊಂಬೆ ಹಾಗೂ ಟ್ಯಾಂಕ್‌ಗಳಲ್ಲಿನ ಅಶುಚಿತ್ವವನ್ನು ಮನಗಂಡ ನಾಗರಿಕರು ರೋಗ ಬಾಧಿಸುವ ಮುನ್ನ ಎಚ್ಚೆತ್ತು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದತ್ತ ಮುಖ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net