

Video Viral: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಯೋಧರು ‘ಆಪರೇಷನ್ ಸಿಂಧೂರ’ ನಡೆಸಿ ಪಾಕ್ ಉಗ್ರರ ನೆಲೆಯನ್ನು ನಾಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ಇಬ್ಬರು ದೇಶದ್ರೋಹಿಗಳನ್ನು ಸ್ಥಳೀಯ ನಾಗರಿಕರು ಥಳಿಸಿದ ಘಟನೆ ಪುಣೆಯ ಕರ್ವೆ ನಗರದಲ್ಲಿ ಶನಿವಾರ ( ಮೇ.10) ನಡೆದಿದೆ.
ಪ್ಯಾಲೆಸ್ಟೈನ್ ಹಾಗೂ ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಕರಪತ್ರಗಳನ್ನು ವಿತರಿಸುತ್ತಿದ್ದರು ಎನ್ನಲಾದ ವಿಡಿಯೋವೊಂದು ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Meghaupadates ಹೆಸರಿನ ಅಕೌಂಟ್ನಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಪುಣೆಯ ಕರ್ವೆ ನಗರದಲ್ಲಿ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಕರಪತ್ರಗಳನ್ನು ವಿತರಿಸುತ್ತಿದ್ದ ಈ ಇಬ್ಬರು ದೇಶದ್ರೋಹಿಗಳನ್ನು ಸ್ಥಳೀಯ ನಾಗರಿಕರು ಥಳಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆ ಸಮಯದಲ್ಲಿ ಅವರ ರಕ್ಷಣೆಗೆ ಬಂದ ಇಬ್ಬಳು ಮಹಿಳೆಯರನ್ನೂ ಸಹ ಸ್ಥಳೀಯ ನಾಗರಿಕರು ಥಳಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಈ ದೇಶದ್ರೋಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗ, ಈ ದೇಶದಲ್ಲಿದ್ದುಕೊಂಡೆ ದೇಶದ್ರೋಹದಂತಹ ಕೃತ್ಯದಲ್ಲಿ ಎಸಗುತ್ತಿರುವ ವ್ಯಕ್ತಿಗಳನ್ನು ಬೆಂಬಲಿಸಬೇಡಿ. ಇನ್ನೊಬ್ಬ ನೆಟ್ಟಿಗ, ‘ಈ ವ್ಯಕ್ತಿಗಳು ನಿಜವಾದ ದೇಶದ್ರೋಹಿಗಳು, ಇವರನ್ನು ಇಷ್ಟಕ್ಕೆ ಸುಮ್ಮನೆ ಬಿಡಬಾರದು’ ಎಂದರೆ, ಮತ್ತೊಬ್ಬರು, ಅತಿರೇಕದ ವರ್ತನೆ ಎಂದು ಗರಂ ಆಗಿದ್ದಾರೆ. (ಏಜೆನ್ಸೀಸ್)