

ಹಾವೇರಿ: ಗ್ರಾಹಕರಿಂದ ಸಾಲದ ಕಂತುಗಳ ಹಣ ವಸೂಲಿ ಮಾಡಿ ಅದನ್ನು ಫೈನಾನ್ಸ್ಗೆ ತುಂಬದೆ ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ನಗರದ ಮುತ್ತೂಟ್ ಮೈಕ್ರೋಪಿನ್ ಲಿಮಿಟೆಡ್ನ ರಿಲೇಷನ್ಸಿಪ್ ಅಧಿಕಾರಿ ಸವಣೂರ ತಾಲೂಕಿನ ಹೂವಿನ ಶಿಗ್ಲಿ ಗ್ರಾಮದ ಮಂಜಪ್ಪ ಫಕ್ಕೀರಪ್ಪ ಕುರಿ (26) ವಂಚಿಸಿರುವ ಆರೋಪಿ.
ಈತನ ವಿರುದ್ಧ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಬಸವರಾಜ ಸಿ.ಎನ್. ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ಮಹಿಳೆಯರಿಗೆ ಅಲ್ಪಾವದಿ ಸಾಲ ಯೋಜನೆ ಉದ್ಯೋಗ ಮತ್ತು ಗೃಹ ಆಧಾರಿತ ವ್ಯಾಪಾರಕ್ಕಾಗಿ ನೀಡಿದ ಸಾಲದ ಹಣದಲ್ಲಿ ಗ್ರಾಹಕರಿಂದ ಮಾಸಿಕ ಕಂತುಗಳ ಮೂಲಕ 4 4 ಲಕ್ಷ ರೂ. ಹಣ ವಸೂಲಿ ಮಾಡಿ ಅದನ್ನು ಕಂಪನಿಗೆ ತುಂಬದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.