

ನವದೆಹಲಿ: ಬಾಬ್ರಿ ಕಟ್ಟಡ ಧ್ವಂಸ ಪ್ರಕರಣ ಸಂಬಂಧ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಹೇಳಿಕೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ದಾಖಲಿಸಿಕೊಂಡಿದೆ. ಲಖನೌ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾಧವ್ ಸಮ್ಮುಖದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಆಡ್ವಾಣಿಯ ವರ ಹೇಳಿಕೆ ಪಡೆಯಲಾಗಿದೆ. ಬೆಳಗ್ಗೆ 11 ಗಂಟೆ ಯಿಂದ ಮಧ್ಯಾಹ್ನ 3.30ರ ವರೆಗೆ ವಿಚಾರಣೆ ನಡೆಯಿತು. ಆಡ್ವಾಣಿ ಅವರಿಗೆ 100ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಯಿತು.
ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅವರು ಅಲ್ಲಗಳೆದರು ಎಂದು ವಕೀಲರು ಮಾಹಿತಿ ನೀಡಿದ್ದಾರೆ. ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಅವರ ಹೇಳಿಕೆಯನ್ನು ನ್ಯಾಯಾಲಯ ಗುರುವಾರ ದಾಖಲಿಸಿಕೊಂಡಿತ್ತು. ಪ್ರಕರಣದ ಇನ್ನಿತರ ಆರೋಪಿ ಗಳಾದ ರಾಮಚಂದ್ರ ಖತಿ, ಶಿವಸೇನೆ ಸಂಸದ ಸತೀಶ್ ಪ್ರಧಾನ್ ಈಗಾಗಲೇ ಹೇಳಿಕೆಗಳನ್ನು ದಾಖಲಿಸಿ ದ್ದಾರೆ. ಆಗಸ್ಟ್ 31ರೊಳ ಗಾಗಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸ ಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಲಖನೌ ವಿಶೇಷ ನ್ಯಾಯಾಲಯ ದಿನನಿತ್ಯ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದೆ.