2050ರ ವೇಳೆಗೆ 1.52 ಮಿಲಿಯನ್ Liver Cancer ಪ್ರಕರಣಗಳು ಉಲ್ಬಣ​! ಹೊಸ ಅಧ್ಯಯನ ವರದಿ ಬಹಿರಂಗ..

Untitled design - 2025-08-05T184144.518
Published on

Liver Cancer: ದಿನೇದಿನೆ ಲಿವರ್​​(ಯಕೃತ್ತಿ) ಕ್ಯಾನ್ಸರ್ ರೋಗ ಉಲ್ಬಣಗೊಳ್ಳಲಿದ್ದು, 2050ರ ವೇಳೆಗೆ ಈ ಪ್ರಕರಣಗಳು ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯೊಂದು ಎಚ್ಚರಿಸಿದೆ.

ದಿ ಲ್ಯಾಟೆನ್ಸ್​ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು ಈ ಬಗ್ಗೆ ಎಚ್ಚರಿಕೆ ನೀಡಿದೆ. ಪ್ರಸ್ತುತ ಪ್ರವೃತ್ತಿಗಳು ಹೀಗೆ ಮುಂದುವರೆದರೆ (ದೈನಂದಿನ ಅನಾರೋಗ್ಯಕರ ಜೀವನ) 2050ರ ವೇಳೆಗೆ ವಿಶ್ವದ್ಯಾಂತ ಯಕೃತ್ತಿ ಕ್ಯಾನ್ಸರ್ ಪ್ರಕರಣಗಳು ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ.

ಹೊಸ ಪ್ರಕರಣಗಳು ವಾರ್ಷಿಕವಾಗಿ 870,000 ರಿಂದ 1.52 ಮಿಲಿಯನ್‌ಗೆ ಹೆಚ್ಚಾಗಬಹುದು, ಅಂದಾಜು ಸಾವುಗಳು 1.37 ಮಿಲಿಯನ್ ತಲುಪುತ್ತವೆ. ಯಕೃತ್ತಿನ ಕ್ಯಾನ್ಸರ್ ಈಗ ಜಾಗತಿಕವಾಗಿ ಮೂರನೇ ಅತ್ಯಂತ ಮಾರಕ ಕ್ಯಾನ್ಸರ್ ಆಗಿದೆ ಎಂದು ಬಹಿರಂಗಗೊಳಿಸಿದೆ.

ಆರಂಭಿಕ ತಡೆಗಟ್ಟುವಿಕೆ ಉತ್ತಮ

ಆಲ್ಕೋಹಾಲ್ ಬಳಕೆ, ವೈರಲ್ ಹೆಪಟೈಟಿಸ್ (ಬಿ & ಸಿ), ಮತ್ತು ಬೊಜ್ಜುತನಕ್ಕೆ ಸಂಬಂಧಿಸಿದ ಯಕೃತ್ತಿನ ಸ್ಥಿತಿಯಾದ ಮೆಟಬಾಲಿಕ್ ಅಪಸಾಮಾನ್ಯ ಕ್ರಿಯೆ-ಸಂಬಂಧಿತ ಸ್ಟೀಟೋಟಿಕ್ ಲಿವರ್ ಡಿಸೀಸ್ (MASLD) ನಂತಹ ತಡೆಗಟ್ಟಬಹುದಾದ ಕಾರಣಗಳನ್ನು ಈ ಅಧ್ಯಯನ ಎತ್ತಿ ತೋರಿಸುತ್ತದೆ. ಶೇ.60ರಷ್ಟು ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳನ್ನು ಆರಂಭಿಕ ತಡೆಗಟ್ಟುವಿಕೆ ಮತ್ತು ಉತ್ತಮ ಸಾರ್ವಜನಿಕ ಆರೋಗ್ಯ ತಂತ್ರಗಳ ಮೂಲಕ ತಪ್ಪಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಹೆಪಟೈಟಿಸ್ ಬಿ ತಡೆಗಟ್ಟಲು ಜನನದ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ, ಆದರೆ ಉಪ-ಸಹಾರನ್ ಆಫ್ರಿಕಾ ಸೇರಿದಂತೆ ಬಡ ದೇಶಗಳಲ್ಲಿ ಲಸಿಕೆ ವ್ಯಾಪ್ತಿ ಕಡಿಮೆಯಾಗಿದೆ ಎಂದು ಅಧ್ಯಯನ ಹೇಳಿದೆ. ಲಸಿಕೆಗಳನ್ನು ಹೆಚ್ಚಿಸದಿದ್ದರೆ, 2015 ಮತ್ತು 2030ರ ನಡುವೆ ಹೆಪಟೈಟಿಸ್ ಬಿ 17 ಮಿಲಿಯನ್ ಜನರನ್ನು ಕೊಲ್ಲುವ ನಿರೀಕ್ಷೆಯಿದೆ ಎಂದು ಎಚ್ಚರಿಕೆ ನೀಡಿದೆ.

2050ರ ವೇಳೆಗೆ ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.21 ಕ್ಕಿಂತ ಹೆಚ್ಚು ಆಲ್ಕೋಹಾಲ್ ಸೇವನೆಯು ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ, ಇದು 2022ಕ್ಕೆ ಹೋಲಿಸಿದರೆ ಶೇಕಡಾ ಎರಡು ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನ ಹೇಳಿದೆ.

ವಿಶ್ವ ಹೆಪಟೈಟಿಸ್ ದಿನದಂದು ಬಿಡುಗಡೆಯಾದ ಈ ವರದಿಯು ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲು ಮತ್ತು ಜಾಗೃತಿಯನ್ನು ಸುಧಾರಿಸಲು ಜಾಗತಿಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net