

ಬೆಂಗಳೂರು: ದ್ವಿತೀಯ ಪಿಯುಸಿಯ ಪರೀಕ್ಷೆಯ ಬಹುನಿರೀಕ್ಷಿತ ಫಲಿತಾಂಶ ಪ್ರಕಟವಾಗಿದ್ದು, ಈಗಾಗಲೇ ವಿದ್ಯಾರ್ಥಿಗಳ ಮೊಬೈಲ್ಗೆ ನೇರವಾಗಿ ರವಾನೆಯಾಗತೊಡಗಿದೆ. 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಿದ್ದು, ಇದರ ವಿವರವನ್ನು ಶಿಕ್ಷಣ ಇಲಾಖೆ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ. ಮಾರ್ಚ್ 4 ರಿಂದ 21 ರ ತನಕ ವಿವಿಧ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ಇಂಗ್ಲಿಷ್ ಭಾಷಾ ಪರೀಕ್ಷೆ ನಂತರದಲ್ಲಿ ನಡೆದಿತ್ತು. ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು ಹಾಜರಿದ್ದಾರೆ.
ದ್ವಿತೀಯ ಪಿಯು ರಿಸಲ್ಟ್ ಚೆಕ್ ಮಾಡುವುದು ಹೇಗೆ?
ಹಂತ 1 - http://karresults.nic.in/ ವೆಬ್ಸೈಟ್ಗೆ ಭೇಟಿ ಕೊಡಿ
ಹಂತ 2- ಹೋಮ್ಪೇಜ್ನಲ್ಲಿರುವ ರಿಸಲ್ಟ್ ಲಿಂಕ್ ಕ್ಲಿಕ್ ಮಾಡಿ
ಹಂತ 3- ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿಕೊಂಡು ಸೈಟ್ಗೆ ಲಾಗಿನ್ ಆಗಿ
ಹಂತ 4 - ನಿಮ್ಮ ಫಲಿತಾಂಶ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ.
ಹಂತ 5- ಅಗತ್ಯ ಇದ್ದರೆ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದಿಟ್ಟುಕೊಳ್ಳಬಹುದು.