ತಿರುವನಂತಪುರದಿಂದ ಕೊಚ್ಚಿಗೆ ಹೃದಯ ಸಾಗಿಸಿದ ಪೊಲೀಸರು

kerala-web
Published on

ತಿರುವನಂತಪುರ: ಕೇರಳ ಪೊಲೀಸರು ಹಾಗೂ ವೈದ್ಯರ ಜಂಟಿ ಪ್ರಯತ್ನದಿಂದ ಶನಿವಾರ ಹೃದಯ ಕಸಿ ಚಿಕಿತ್ಸೆಗಾಗಿ ತಿರುವನಂತಪುರದಿಂದ ಕೊಚ್ಚಿಗೆ 40 ನಿಮಿಷದಲ್ಲಿ ಹೃದಯವನ್ನು ಯಶಸ್ವಿಯಾಗಿ ಸಾಗಿಸಲಾಗಿದೆ.
ಲಾಕ್​ಡೌನ್​​ನಿಂದಾಗಿ ಎಲ್ಲ ಜಿಲ್ಲೆಗಳ ಗಡಿ ಭಾಗಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ರಾಜ್ಯ ಪೊಲೀಸ್ ಇಲಾಖೆಯ ಹೆಲಿಕಾಪ್ಟರ್​ ಅನ್ನು ಬಾಡಿಗೆ ಪಡೆದುಕೊಂಡು ಹೃದಯವನ್ನು ಸಾಗಿಸಲಾಯಿತು.
ಕೇರಳ ಪೊಲೀಸರು ಹಾಗೂ ವೈದ್ಯಕೀಯ ತಂಡದ ನೆರವಿನಿಂದ ಈ ಕಾರ್ಯ ಸಾಧ್ಯವಾಗಿದೆ. ಇದೇ ಮೊದಲ ಬಾರಿಗೆ ಕೇರಳ ಪೊಲೀಸ್ ಪ್ರಾಣ ಉಳಿಸುವ ಮಹಾನ್​ ಕಾರ್ಯಕ್ಕೆ ತಮ್ಮ ಹೆಲಿಕಾಪ್ಟರ್​ ಅನ್ನು ಬಾಡಿಗೆಗೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಮೊದಲು ಅಂಬುಲೆನ್ಸ್​ನಲ್ಲಿ ಹೃದಯವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬಳಿಕ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ತಲುಪಿಸಲಾಯಿತು. ಹೃದಯ ಕಸಿ ಶಸ್ತ್ರಚಿಕಿತ್ಸೆ ಶನಿವಾರವೇ ನಡೆಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net