ಆಡುವ ವಯಸ್ಸಿನಲ್ಲಿ 7ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಮುದ್ದು ಬಾಲಕಿ! ವಿಡಿಯೋ ನೋಡುವುದು ಮರೆಯಬೇಡಿ..

Little Girl Knows Seven Languages
Published on: 

ನವದೆಹಲಿ:   ಭಾಷೆ ಎನ್ನುವುದು ತುಂಬಾ ಮುಖ್ಯವಾಗಿದೆ. ಪ್ರತಿ ಊರು, ಜಿಲ್ಲೆ, ದೇಶ, ವಿದೇಶಗಳು ತನ್ನದೆ ಆಗಿರುವ ಸಂಸ್ಕೃತಿ ಹಾಗೂ ಭಾಷೆಯನ್ನು ಹೊಂದಿವೆ. ಜಗತ್ತಿನಲ್ಲಿ ಹಲವಾರು ದೇಶಗಳಿವೆ.. ಹಲವು ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಿಶ್ರಣ.. ಮತ್ತು ಅವರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಎರಡ್ಮೂರು ಭಾಷೆ ಗೊತ್ತಿದ್ದರೆ ಇನ್ನು ಕೆಲವರು ನಾಲ್ಕು ಭಾಷೆ ಮಾತನಾಡುತ್ತಾರೆ. ಆದರೆ ಇಲ್ಲೊಬ್ಬಳು 4-5 ವರ್ಷದ ಪುಟ್ಟ ಬಾಲಕಿ 7 ಭಾಷೆ ಮಾತನಾಡುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.

ಟಿವಿ ಶೋ ಲಿಟಲ್ ಬಿಗ್ ಶಾಟ್ಸ್‌ನಿಂದ ಬಂದಿದೆ. ಇದರಲ್ಲಿ ಪ್ರಪಂಚದಾದ್ಯಂತದ ಪ್ರತಿಭಾವಂತ ಮಕ್ಕಳನ್ನು ಆಹ್ವಾನಿಸಲಾಗಿದೆ. ಹುಡುಗಿಯರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಿದ್ದಾಳೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?: ನನಗೆ ವಿವಿಧ ಭಾಷೆಗಳು ಅರ್ಥವಾಗುತ್ತವೆ . ರಷ್ಯನ್, ಇಂಗ್ಲಿಷ್, ಅರೇಬಿಕ್, ಇಟಾಲಿಯನ್, ಸ್ಪ್ಯಾನಿಷ್, ಜರ್ಮನ್, ಚೈನೀಸ್ ತಿಳಿದಿದೆ ಎಂದು ಬಾಲಕಿ ಹೇಳುತ್ತಾಳೆ. ಹುಡುಗಿ ಎಲ್ಲಾ ಭಾಷೆಗಳನ್ನು ಒಂದೊಂದಾಗಿ ಹೇಗೆ ಮಾತನಾಡುತ್ತಾಳೆ ಎಂಬುದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಜರ್ಮನ್‌ನಿಂದ ಪ್ರಾರಂಭಿಸಿ, ಅರೇಬಿಕ್, ಸ್ಪ್ಯಾನಿಷ್, ಚೈನೀಸ್ ಸೇರಿದಂತೆ ಎಲ್ಲಾ ಭಾಷೆಗಳನ್ನು ಮಾತನಾಡುವ ಮೂಲಕ ಅವಳು ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಾಳೆ. 

ವೀಡಿಯೊವನ್ನು ವೀಕ್ಷಿಸಿದ ನಂತರ ನೆಟಿಜನ್‌ಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದರು. ‘ಇಂತಹ ಪ್ರತಿಭೆ ಇರುವ ಹುಡುಗಿಯನ್ನು ನಾನೆಂದೂ ನೋಡಿಲ್ಲ’  ‘ಹುಡುಗಿ ಇಷ್ಟು ಚಿಕ್ಕ ವಯಸ್ಸಿನಲ್ಲೇ ಹಲವು ಭಾಷೆಗಳನ್ನು ಕಲಿತಿರುವುದು ಅದ್ಭುತ’ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @ThebestFigen ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಕೇವಲ 58 ಸೆಕೆಂಡ್ ಗಳ ಈ ವಿಡಿಯೋವನ್ನು ಇದುವರೆಗೆ 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.