ಮನಸ್ಸಿನ ವಿಕಾರಗಳಿಗೆ ಸಾಹಿತ್ಯ ದಿವ್ಯೌಷಧ

Sahyadri College programme
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಾಹಿತ್ಯದ ಓದು ಮತ್ತು ಬರವಣಿಗೆ ಕುರಿತು ಸಾಹಿತಿ ಡಾ. ಮಾನಸಾ ಕೀಳಂಬಿ ಉಪನ್ಯಾಸ ನೀಡಿದರು. ಡಾ. ಎಂ.ಹಾಲಮ್ಮ, ಡಾ. ಮೋಹನ್ ಚಂದ್ರಗುತ್ತಿ, ಡಿ.ನೀಲಪ್ಪ ಉಪಸ್ಥಿತರಿದ್ದರು.
Published on

ಶಿವಮೊಗ್ಗ: ಬದುಕಿನ ಎಲ್ಲ ಪ್ರಶ್ನೆಗಳಿಗೆ ಗೂಗಲ್ ಉತ್ತರವಲ್ಲ. ಗುರುಗಳು ಗುರಿ ತೋರುವ ಕೈಗಳೇ ಹೊರತು ಗುರಿ ಮುಟ್ಟುವ ದಾರಿ ವಿದ್ಯಾರ್ಥಿಗಳದ್ದೇ ಆಗಬೇಕಿದೆ ಎಂದು ಸಾಹಿತಿ ಡಾ. ಮಾನಸಾ ಕೀಳಂಬಿ ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಶನಿವಾರ ಕನ್ನಡ ವಿಭಾಗದ ಕನ್ನಡ ಸಾಹಿತ್ಯ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಓದು ಮತ್ತು ಬರವಣಿಗೆ ಕುರಿತು ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಹದಗೆಡಿಸುವ ಸಂಗತಿಗಳು ಹೆಚ್ಚುತ್ತಿದ್ದು, ಅದರಿಂದ ಹೊರಬರಲು ಓದು ದಿವ್ಯೌಷಧವಾಗಿ ಕೆಲಸ ಮಾಡುತ್ತದೆ. ಅಭಿರುಚಿಗಳು ಸಾಮಾಜಿಕ ಜಾಲತಾಣಗಳಲ್ಲಿನ ಓದುವಿಕೆಯಲ್ಲಿ ಪರಿಸಮಾಪ್ತಿಗೊಳ್ಳುವುದಿಲ್ಲ. ಸಾಹಿತ್ಯ ಓದು ಮತ್ತು ಬರವಣಿಗೆ ನಮ್ಮೆಲ್ಲ ವಿಕಾರಗಳನ್ನು ನಾಶಗೊಳಿಸುವ ಮೂಲವಾಗಿದೆ ಎಂದರು.
ವರ್ತಮಾನದ ಸಮಾಜದ ಅನೇಕ ತಲ್ಲಣಗಳಿಗೆ ಸಾಹಿತ್ಯದ ಓದು ಪರಿಹಾರ ಒದಗಿಸುತ್ತದೆ. ಓದನ್ನು ರೂಢಿಸಿಕೊಳ್ಳದ ಯುವ ಸಮುದಾಯ ಸಂಸ್ಕಾರಗಳಿಂದ ದೂರವಾಗುತ್ತಿದೆ. ಬದುಕಿನ ಅಪಾಯಗಳಲ್ಲಿ ಸಿಲುಕುತ್ತಿರುವ ಕುರಿತು ಆತಂಕವಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಅವರ ಸಾಹಿತ್ಯ ಸೇವೆ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಹಿತ್ಯ ವೇದಿಕೆ ಸಂಚಾಲಕಿ ಡಾ. ಎಂ.ಹಾಲಮ್ಮ ಪ್ರಾಸ್ತಾವಿಕ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ. ಮೋಹನ್ ಚಂದ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ. ಜಿ.ಕೆ.ಪ್ರೇಮಾ ವಸುಂಧರ, ಡಿ.ನೀಲಪ್ಪ, ವಿದ್ಯಾರ್ಥಿ ಪದಾಧಿಕಾರಿಗಳಾದ ಕೆ.ಎ.ಪ್ರಗತಿ, ಕೋಗಳಿ ಸಂದೀಪ್‌ಕುಮಾರ್, ಕೆ.ಟಿ.ಪ್ರಮೋದ್‌ಕುಮಾರ್, ಆರ್.ಮೋನಿಕಾ, ಬಿ.ಭರತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net