ಸಂಗೀತ ಆಲಿಕೆಯಿಂದ ಚೈತನ್ಯ ವೃದ್ಧಿ

music 2
ಸೊರಬದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕ ಉಪಾಸನ ಮೋಹನ್ ಅವರನ್ನು ಸನ್ಮಾನಿಸಲಾಯಿತು. ಎಚ್.ಗುರುಮೂರ್ತಿ, ಪಾಣಿ ರಾಜಪ್ಪ, ಕೃಷ್ಣಾನಂದ ಇತರರಿದ್ದರು.
Published on

ಸೊರಬ: ಸಂಗೀತ, ಗಾಯನ ಸುಧೆಯನ್ನು ಪ್ರಪಂಚಕ್ಕೆ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಸಂಗೀತ ಆಲಿಸುವುದು, ಹಾಡುಗಳನ್ನುಹಾಡುವುದರಿಂದ ಚೈತನ್ಯ ವೃದ್ಧಿಸುತ್ತದೆ ಎಂದು ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಶಂಕರ ಶೇಟ್ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ಸುಗಮ ಪರಿಷತ್ ಶಿವಮೊಗ್ಗ ಮತ್ತು ಸೊರಬ ಘಟಕ ಹಾಗೂ ಸೊರಬ ಗುರುಕುಲ ಆಶ್ರಯದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗೀತಾ ಗಾಯನ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು.

ಈಗಾಗಲೇ ಈ ಕಲೆಯಲ್ಲಿ ಛಾಪು ಮೂಡಿಸಿದ ಗಾಯಕರಾದ ಲಕ್ಷ್ಮೀ ಮುರಳೀಧರ್, ಪೂರ್ಣಿಮಾ ಭಾವೆ ಸೇರಿ ಇನ್ನಿತರ ಕಲಾವಿದರು ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡಲು ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಸುಗಮ ಸಂಗೀತ ಗಾಯಕ ಉಪಾಸನ ಮೋಹನ್, ಸಂಗೀತಕ್ಕೆ ಮನಸ್ಸನ್ನು ಅರಳಿಸುವ ಶಕ್ತಿ ಇದೆ. ಗಾಯನ, ಸ್ವರ, ತಾಳ ಹಾಗೂ ಧ್ವನಿ ಸಂಗೀತದಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಇವುಗಳ ಮೇಲೆ ಸಾಧಿಸಿದ ವ್ಯಕ್ತಿ ಮಾತ್ರ ಶ್ರೇಷ್ಠ ಕಲಾವಿದನಾಗಲು ಸಾಧ್ಯ. ಕಳೆದ 30 ವರ್ಷಗಳಿಂದ ಈ ಕಲೆಯಲ್ಲಿ ವಿದ್ಯಾರ್ಥಿಯೇ ಆಗಿದ್ದೇನೆ. ಸಾಧನೆ ಮಾಡಲು ಬಹಳಷ್ಟಿದೆ. ಪ್ರತಿ ದಿನ ಕಲಿಯುವುದೂ ಇದೆ ಎಂದು ತಿಳಿಸಿದರು.

ಸುಗಮ ಸಂಗೀತ್ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಗುರುಮೂರ್ತಿ, ಪಾಣಿ ರಾಜಪ್ಪ, ಶಿಕ್ಷಕರಾದ ಕೃಷ್ಣಾನಂದ, ಎಸ್.ಷಣ್ಮುಖಚಾರ್, ಪತ್ರಕರ್ತ ಯು.ಎನ್.ಲಕ್ಷ್ಮೀಕಾಂತ, ಪೂರ್ಣಿಮಾ ಭಾವೆ, ಲಕ್ಷ್ಮೀ ಮುರಳೀಧರ್, ಲಕ್ಷ್ಮಣ, ಈರಪ್ಪ, ಸತೀಶ ಬೈಂದೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net