ಮನೆಯಲ್ಲೇ ಕೂತಿರಿ, ಅಲ್ಲಿಗೇ ಸಪ್ಲೈ ಮಾಡ್ತೇವೆ ಎಣ್ಣೆ ಎಂದ ಕೇರಳ ಸರ್ಕಾರ!- ಇದ್ರೆ ಇಂಥಾ ಸರ್ಕಾರ ಇರಬೇಕಪ್ಪಾ ಅಂತಿವೆ ಎಣ್ಣೆಪಾರ್ಟಿಗಳು!

Alchol (FILEminimizer)
Published on

ಕಾಸರಗೋಡು: ಲಾಕ್​ಡೌನ್ ಹಿನ್ನೆಲೆಯಲ್ಲಿ ಮದ್ಯ ಸೇವಿಸಲಾರದೆ ಖಿನ್ನರಾಗುವವರಿಗೆ ವೈದ್ಯರ ಶಿಫಾರಸಿನ ಮೇರೆಗೆ ಕೇರಳ ಸರ್ಕಾರ ಮನೆಗಳಿಗೇ ಮದ್ಯ ಪೂರೈಕೆ ಮಾಡಲಿದೆ. ವೈದ್ಯರ ಶಿಫಾರಸು ಪತ್ರ ಪ್ರಕಾರ ಒಬ್ಬರಿಗೆ ವಾರಕ್ಕೆ ಮೂರು ಲೀಟರ್ ಮದ್ಯ ನೀಡಲು ಅಬಕಾರಿ ಇಲಾಖೆ ಸಿದ್ಧವಾಗಿದೆ.

ಔಟ್​ಲೆಟ್​ನ ನಿಗದಿತ ಬೆಲೆಗೆ ಪೂರೈಕೆ ಮಾಡಲಿದ್ದು, ನೂರು ರೂ. ಸರ್ವೀಸ್ ಚಾರ್ಜ್ ಪಡೆಯಲಾಗುವುದು. ರಮ್ ಮತ್ತು ಬ್ರಾಂಡಿ ಮಾತ್ರ ವಿತರಣೆ ಮಾಡಲಾಗುವುದು. ಇಬ್ಬರು ಸಿಬ್ಬಂದಿಯನ್ನು ಇದಕ್ಕೆ ಬಳಸಿಕೊಳ್ಳಲಾಗುವುದು. ಈ ವಾಹನಕ್ಕೆ ಪರವಾನಗಿ ಪತ್ರ ಹಾಗೂ ಸಿಬ್ಬಂದಿಗೆ ವಿಶೇಷ ಗುರುತಿನ ಚೀಟಿಯೂ ಇರಲಿದೆ. ಮದ್ಯ ಸಾಗಾಟದ ವಾಹನಕ್ಕೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಬೆಂಗಾವಲಿಗೆ ತರಳಬೇಕೆಂದೂ ಬೆವರೇಜಸ್ ಕಾಪೋರೇಶನ್ ಎಂ.ಡಿ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net