ಮಹಾರಾಷ್ಟ್ರದಲ್ಲಿ ಮನೆ ಬಾಗಿಲಿಗೇ ಸರಬರಾಜಾಗಲಿದೆ ಮದ್ಯ

maha
Published on

ಮುಂಬೈ: ದೇಶಾದ್ಯಂತ ನೇರವಾಗಿ ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡುವಂತೆ ಸುಪ್ರೀಂಕೋರ್ಟ್​ ನೀಡಿದ್ದ ಸೂಚನೆಯನ್ನು ಪಾಲಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಇದಕ್ಕಾಗಿ ಮಹಾರಾಷ್ಟ್ರ ರಾಜ್ಯ ಅಬಕಾರಿ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂಬಂಧ ಅದು ಕೆಲವು ಮಾರ್ಗದರ್ಶಿ ನೀತಿಗಳನ್ನು ರೂಪಿಸಿದ್ದು, ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮದ್ಯ ಸರಬರಾಜುದಾರರಿಗೆ ತಿಳಿಸಿದೆ.

ಕರೊನಾದ ಕೇಂದ್ರಬಿಂದುಗಳು ಎನಿಸಿಕೊಂಡಿರುವ ಮುಂಬೈ ಮತ್ತು ನಾಗ್ಪುರ ಹೊರತುಪಡಿಸಿ, ಮಹಾರಾಷ್ಟ್ರ ರಾಜ್ಯದ ಇತರೆ ಭಾಗಗಳಲ್ಲಿ ನೇರವಾಗಿ ಮನೆಬಾಗಿಲಿಗೇ ಮದ್ಯ ಪೂರೈಕೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net