ಹೋಮ ಕುಂಡದಲ್ಲಿ ಮದ್ಯದ ಬಾಟಲಿ

homakunda
ಕೂದುವಳ್ಳಿ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿದ್ದ ಹೋಮ ಕುಂಡಕ್ಕೆ ಮದ್ಯದ ಪೌಚ್‌ಗಳನ್ನು ಹಾಕಿರುವುದು .
Published on

ಆಲ್ದೂರು: ಸಮೀಪದ ಕೂದುವಳ್ಳಿ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಪಾರ್ಟಿ ಮಾಡಿ ದೇವರ ಸೀರೆಗಳನ್ನೇ ಹೊದ್ದು ಮಲಗಿ ಹೋಮ ಕುಂಡಕ್ಕೆ ಮದ್ಯದ ಬಾಟಲಿಗಳನ್ನು ಹಾಕಿ ವಿಕೃತಿ ಮೆರೆದಿದ್ದಾರೆ.
ಕೂದುವಳ್ಳಿ ಗ್ರಾಮಸ್ಥರಾದ ಕೃಷ್ಣಮೂರ್ತಿ, ಸುಬ್ರಹ್ಮಣ್ಯ ಎಂಬುವವರು ಆಲ್ದೂರು ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಆಲ್ದೂರು ಪಿಎಸ್‌ಐ ಅಕ್ಷಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ ಹೋಮ ಕುಂಡದಲ್ಲಿರುವ ಭಸ್ಮವನ್ನು ಮನೆಗೆ ತೆಗೆದುಕೊಂಡು ಹೋಗಲು ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಹೋಮ ಕುಂಡದಲ್ಲಿ ಮದ್ಯದ ಬಾಟಲಿಗಳು, ಪೌಚ್‌ಗಳು ಬಿದ್ದಿದ್ದವು. ಅಲ್ಲದೆ ಹೋಮಕ್ಕೆ ತಂದು ಉಳಿದಿದ್ದ ಸೌದೆಯನ್ನೇ ಮತ್ತೆ ಹೋಮಕುಂಡಕ್ಕೆ ಹಾಕಿ ಪೈರ್‌ಕ್ಯಾಂಪ್ ಮಾಡಿ ಹೋಮ ಕುಂಡದ ಬಳಿ ರಂಗೋಲಿಯಲ್ಲಿ ಬರೆದಿದ್ದ ರಾಮನಾಮವನ್ನು ಅಳಿಸಿ ದೇವರ ಸೀರೆಯನ್ನೇ ಹೊದ್ದು ಮಲಗಿ ವಿಕೃತಿ ಮೆರೆದಿದ್ದಾರೆ. ಈ ಸಂಬಂಧ ಆಲ್ದೂರು ಠಾಣೆಗೆ ದೂರು ನೀಡಿದ್ದೇವೆ ಎಂದು ಕೂದುವಳ್ಳಿ ಗ್ರಾಮಸ್ಥ ದಿವಾಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net