

ರಾಣೆಬೆನ್ನೂರ: ಸ್ಥಳೀಯ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಜು. 15ರಂದು ಸಂಜೆ 6ಕ್ಕೆ ನಗರದ ಮೇಡ್ಲೇರಿ ರಸ್ತೆ ಆದಿಶಕ್ತಿ ದೇವಸ್ಥಾನದ ಬಿ.ಕೆ. ಗುಪ್ತಾ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.
ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯದ ಜಂಟಿ ಆಯುಕ್ತ ಎನ್. ರವಿಕುಮಾರ ಹಾಗೂ ಧಾರವಾಡದ ವಾಣಿಜ್ಯ ತೆರಿಗೆ ಇಲಾಖೆ ಆಡಳಿತ ವಿಭಾಗದ ಜಂಟಿ ಆಯುಕ್ತ ಬಿ. ನಾಗರಾಜರಾವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಶಿವಪ್ಪ ಗುರಿಕಾರ, ಕಾರ್ಯದರ್ಶಿ ಕಿರಣಕುಮಾರ ಅಂಗಡಿ, ಖಜಾಂಚಿ ಗುತ್ತೆಪ್ಪ ಹಳೆಮನಿ ಹಾಗೂ ಇತರ ಪದಾಧಿಕಾರಿಗಳಿಗೆ ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ಜೈ ಅನಮೋಲ್ ನಾಯ್ಕ ಪ್ರಮಾಣವಚನ ಬೋಧಿಸುವರು ಎಂದು ಪ್ರಕಟಣೆ ತಿಳಿಸಿದೆ.