ಲಿಂಗಾಯತರು ನಡೆ ವೀರರಲ್ಲ, ನುಡಿ ವೀರರು: ಬೆಕ್ಕಿನಕಲ್ಮಠದ ಶ್ರೀ

Bekkinakalmathsree
ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ
Published on

ಶಿವಮೊಗ್ಗ: ಲಿಂಗಾಯತರು ನುಡಿ ವೀರರೋ ಹೊರೆತು ನಡೆ ವೀರರಲ್ಲ. ನುಡಿಯಲ್ಲಿ ಜಾಣರಾಗಿದ್ದೇವೆ. ಆದರೆ ನುಡಿದಂತೆ ನಡೆಯುತ್ತಿಲ್ಲ. ಈ ಬಗ್ಗೆ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಚೌಕಿ ಮಠದ ಆವರಣದಲ್ಲಿ ಶುಕ್ರವಾರ ಶಿವಮೊಗ್ಗ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕೆಲವರು ವೇದಿಕೆಯಲ್ಲಿ ವೀರತನ ತೋರಿಸಿದ್ದಾರೆ. ವೀರಭದ್ರನ ಉತ್ಸಾಹ ಬಂದಿರುವುದು ಸಮಾಧಾನ ತರಿಸಿದೆ. ನುಡಿಯಲ್ಲಿ ಎಚ್ಚೆತ್ತುಕೊಳ್ಳುವುದಕ್ಕಿಂತ ನಡೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಸಮಾಜದ ವಿಶ್ಲೇಷಣೆ ಮಾಡುವ ಕಡೆಗೆ ನಮ್ಮನ್ನು ನಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಸಮಾಜದ ಅಸ್ತಿತ್ವಕ್ಕೆ ನೆಲೆ, ಬೆಲೆ ಬರುತ್ತದೆ. ನಮ್ಮ ಸಮಾಜಕ್ಕೆ ಯಾವುದೇ ಮಾಡೆಲ್ಗಳು ಬೇಡ. 12ನೇ ಶತಮಾನದ ಮಹಾ ಮಾರ್ಗದಲ್ಲಿ ನಡೆದರೆ ಸಮಾಜದ ಎಲ್ಲ ಅಂಕು ಡೊಂಕುಗಳಿಗೆ ಪರಿಹಾರ ಸಿಗಲಿದೆ. ಸಮಾಜ, ಮಾನವೀಯತೆ ವಿರುದ್ಧ ಕ್ರಿಯೆ ನಡೆಯುತ್ತವೆಯೋ ಅಲ್ಲಿ ವೀರಭದ್ರ ಜನ್ಮ ತಾಳಿದ್ದು ಪ್ರತಿಯೊಬ್ಬರು ಸಮಾಜದ ಪುನರುತ್ಥಾನದ ಕ್ರಿಯೆ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net